17/12/2025
IMG-20250602-WA0002

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಸಹ್ಯಾದ್ರಿ ನಗರ ಕುವೆಂಪು ನಗರ ಬೆಳಗಾವಿ

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ದಿನಾಂಕ 1,6,2025 ರವಿವಾರದ ಸತ್ಸಂಗದಲ್ಲಿ ಶರಣರಾದ ದುಂಡಪ್ಪ ಸಂಕೇಶ್ವರವರು ಗಾಳಿ ನೀರು ಬೇಳಕು
ಹೀಗೆ ಸಷ್ಟಿಯ ಎಲ್ಲ ಕೊಡುಗೆಯೂ ಪ್ರಸಾದಮಯವಾಗಿದ್ದು ಹಾಗೂ ನಾವು ಉಣ್ಣುವ ಅನ್ನವನ್ನು ಕೇಡ ಮಾಡಬಾರದು ಅನ್ನವನ್ನು ಲಿಂಗಕ್ಕೆ ಎಡೆ ಮಾಡಿ ಉಂಡಾಗ ಅದು ಪ್ರಸಾದ ರೂಪವಾಗುತ್ತದೆ ತುತ್ತಿಗೊಮ್ಮೊಮ್ಮೆ ಶಿವನಾಮಸ್ಮರಣೆ ಮಾಡುತ್ತಾ ಸ್ವಿಕರಿಸಬೇಕೇಂದು ಪ್ರಸಾದ ಕುರಿತು ವಚನಗಳನ್ನು ವಿಶ್ಲೇಷಣೆ ಮಾಡುತ್ತಾ ಬಿಬ್ಬಿ ಬಾಚಯ್ಯನವರು ಎಲ್ಲಿ ಅನ್ನ ಉಂಡು ಉಳಿದು ನಾಶವಾಗುತ್ತದೆಯೋ ಅಲ್ಲಿಂದ ಅನ್ನವನ್ನು ತೆಗೆದು ಕೊಂಡು ಹೋಗಿ ಹಸಿದವರಿಗೆ ಹಂಚುತ್ತಿದ್ದರು ಎಂದು ಅವರ ಪ್ರಸಾದ ಕಾಯಕ ಹಾಗೂ ಪ್ರಸಾದದ ಮಹತ್ವವನ್ನು ಹೇಳಿದರು. ವಚನ ವಿಶ್ಲೇಷಣೆಯಲ್ಲಿ ಶರಣೆಯರಾದ ಲಲಿತಾ ರುದ್ರಗೌಡರು ನಾವು ಮಾಡುವ ಕೆಲಸವನ್ನು ಹೇಳಿಕೊಳ್ಳದೆ ಮಾಡಿಯೂ ಮಾಡದಂತಿರಬೇಕೇಂದು ಹೇಳಿದರೆ, ದಾನಮ್ಮಾ ಝಳಕಿಯವರು ಅಕ್ಕ ನಾಗಮ್ಮನ ವಚನ ಹೇಳುತ್ತ ಜೀವನದಲ್ಲಿ ನಿರಾಶಾಭಾವನೇ ಹೊಂದದೆ ನಿಂದೆನೆಗಳನ್ನು ಎದುರಿಸಿ ನಾವು ನಮ್ಮ ಗುರಿಯತ್ತ ಸಾಗಲು ಆತ್ಮ ವಿಶ್ವಾಸ , ಮತ್ತು ಧೈರ್ಯವನ್ನು ತುಂಬಲು ವಚನಗಳು ಎಷ್ಟೋಂದು ಪೂರಕವಾಗಿವೆ ಎಂದು ಹೇಳಿದರು.

IMG 20250602 WA0003 - IMG 20250602 WA0003

ಶರಣೆಯರಾದ ವಸಂಕ್ಕಾ ಗಡಕರಿ, ಶಾರದಾ ಉಡಕೆರಿ, ನಾಗರತ್ನಾ ಪಾಟಿಲ ವಚನ ಗಾಯನ ಮಾಡಿದರು, ಅಧ್ಯಕ್ಷರಾದ ಎಸ್ ಜೀ ಸಿದ್ನಾಳರು, ಶಂಕರ ಶೆಟ್ಟಿ, ಮಹಾದೇವ ಕೊರಿ, ಮೋಹನ್ ಮುನವಳ್ಳಿ ಅವರು ಕೂಡಾ ವಚನಗಳನ್ನು ವಿಶ್ಲೇಷಣೆ ಮಾಡಿದರು. ಸುನಿತಾ ನಂದೆಣ್ಣವರ ಹಾಗೂ ಲಲಿತಾ ರುದ್ರಗೌಡರ ಪ್ರಾರ್ಥನೆ ನಡೆಸಿಕೊಟ್ಟರು, ನಿರೂಪಣೆ ಸುನಿತಾ ನಂದೆಣ್ಣವರ ಮೋಡಿದರು ಉಪಾಧ್ಯಕ್ಷರು ಕುಂದ್ರಾಳ,ಗುರವನ್ನವರ, ಹಾಗೂ ಜಯಶ್ರೀ. ಮುಗಳಿ ಸರೋಜಿನಿ ನಡುವಿನ ಹಳ್ಳಿ ಹಾಜರಿದ್ದರು.

error: Content is protected !!