17/12/2025
IMG-20250602-WA0001

ಬೆಳಗಾವಿ-02:- ೧-೬-೨೦೨೫. ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ವಾರದ ಸಾಮೂಹಿಕ ಪ್ರಾರ್ಥನೆ ಕುಂಬಾರ ಶರಣದಂಪತಿಗಳ 53ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಜರುಗಿತು. ಅಧ್ಷಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು.ಮಹಾದೇವಿ ಅರಳಿ ಅವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು ಬಿ.ಪಿ. ಜೇವಣಿ ವಚಗಾಯನ ಪ್ರಸ್ತುತ ಪಡಿಸಿದರು ಶಂಕರಗುಡಸ ಮಾತನಾಡುತ್ತ ಲಿಂಗದಿಂದ ಸಾಧನೆ ಮಾಡಬಹುದು.ಗುರುಸ್ಮರಣೆ ಮಾಡುತ್ತ ಲಿಂಗ ಪೂಜೆ ಮಾಡಬೇಕು.ಒಂದು ಹೊತ್ತು ಊಟ ಮಾಡಿದವ ಯೋಗಿ,ಎರಡುಹೊತ್ತು ಊಟ ಮಾಡಿದವ ಭೋಗಿ,ಮೂರು ಹೊತ್ತು ಊಟ ಮಾಡಿದವನ್ನ ಹೊತ್ತ ಕೊಂಡು ಹೋಗಿ ಸವ೯ಜ್ಞನ ವಚನ ತಿಳಿಸಿದರು.ಪಾದೋದಕ ಮಹತ್ವ ವಿವರಿಸಿದರು.ಮನಸ್ಸು ನಿಮ೯ಲ ವಾಗಿರಬೇಕು.ಗುರು ಕರುಣೆ ಇರಬೇಕು.ಕರುಣೆ ಇರಲಿ,ಎಲ್ಲರಲ್ಲೂಎಂದು ತಿಳಿಸಿದರು.ಮಹಾಂತೇಶ ಇಂಚಲ ಅವರು ವೈರಾಗ್ಯದ ಕುರಿತು ತಿಳಿಸಿದರು.ಸನ್ನಿವೇಶ ನೋಡಿ ಕ್ಷಣಿಕ ವೈರಾಗ್ಯ ಬರಬಾರದು.ಕಣ್ಣು ಕೊಟ್ಟ ತಾಯಿಯ ಕಥೆ ಹೇಳಿದರು. ಮೊನ್ನೆ ಅಗಲಿದ ಡಾವಣಗೆರಿಯ ಲಿಂಗೈಕ್ಯ ಶರಣ ಮಹಾ೦ತೇಶ ಅಗಡಿಯವರಿಗೆ ಮುಕ್ತಿ ಕೋರಿ ಪ್ರಾಥಿ೯ಸಲಾಯಿತು.ಲೀಲಾವತಿ ಲಕ್ಷಣ ಕು೦ಬಾರ ದಾಸೋಹ ಸೇವೆಗೈದರು.ಲಕ್ಷಣ ಕುಂಬಾರರ ಪರಿಚಯವನ್ನು ಮಹಾಂತೇಶ ಮೆಣಸಿನಕಾಯಿ ಅವರು ಪರಿಚಯಸಿದರು.ಬಸವರಾಜ ಕರಡಿಮಠ,ಬಸವರಾಜ ಬಿಜ್ಜರಗಿ,ಮಹಾಂತೇಶ ಇಂಚಲ,ಪ್ರಸಾದ ಹಿರೇಮಠ,ದೊಡಗೌಡ ಪಾಟೀಲ,ಕರಲಿಂಗನ್ನವರ,ರುದ್ರಗೌಡ ಪಾಟೀಲ,ಗಂಗಪ್ಪ ಉಣಕಲ್,ಶಿವಾನಂದ ನಾಯಕ,ಕೆಂಪಣ್ಣಾ ರಾಮಾಪೂರೆ,ಶೇಖರ ವಾಲಿಇಟಗಿ,ತಿಗಡಿ ದಂಪತಿಗಳು,ಶಿವಾನಂದ ನಾಯಕ,ಪ್ರೇಮ ಚೌಗಲೆ ,ಸಿದ್ದಪ್ಪ ಸಾರಾಪೂರೆ,ಗಂಗಾಧರ ಹಿತ್ತಲಮನಿ,ಶರಣಶರಣೆಯರು ಉಪಸ್ಥತರಿದ್ದರು. ಸುರೇಶ ನರಗುಂದ ಉಪಸ್ಥಿತರಿದ್ದರು ಸಂಗಮೇಶ ಅರಳಿ ನಿರೂಪಿಸಿ ವಂದಿಸಿದರು.

error: Content is protected !!