filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 0; AI_Scene: (-1, -1); aec_lux: 69.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 44;
ಅಕ್ರಮದ ಕುರಿತು ದಾಖಲೆ ಬಿಡುಗಡೆಗೊಳಿಸಿದ ನ್ಯಾಯವಾದಿ ರಾಜು ಶಿರಗಾಂವೆ..
ಬೆಳಗಾವಿ-30 : ಶುಕ್ರವಾರ ದಿನಾಂಕ 30/05/2025 ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಥಣಿ ಮೂಲದ ನ್ಯಾಯವಾದಿ ರಾಜು ಎಸ್ ಶಿರಗಾಂವೆ ಅವರು ಬೆಳಗಾವಿಯಲ್ಲಿ ಕಿಯೋನಿಕ್ಸ್ ಪ್ರಾಂಚಾಯ್ಸಿಯನ್ನು ನಡೆಸುತ್ತಿರುವ ಲಕ್ಷ್ಮಿ ಶೆಟ್ಟಿ ಹಾಗೂ ಉದಯ ಶೆಟ್ಟಿ ಅವರುಗಳ ವಿರಿದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಜೂನ್ ಮೂರರ ಒಳಗೆ ಕಿಯೋನಿಕ್ಸ್ ಬೋರ್ಡ್ ತಗೆಯದೇ ಇದ್ದರೆ ಸಂಸ್ಥೆಯ ವಿರುದ್ಧ ತಮಟೆ ಚಳುವಳಿಯನ್ನು ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ..
ಸುದ್ದಿಗೋಷ್ಟಿಯಲ್ಲಿ ನ್ಯಾಯವಾದಿಗಳು ಲಕ್ಷ್ಮಿ ಶೆಟ್ಟಿ ಮತ್ತು ಉದಯ ಶೆಟ್ಟಿ ಮೇಲೆ ಮಾಡಿದ ಆರೋಪಗಳು ಈ ಕೆಳಗಿನಂತಿವೆ,,
ರದ್ದುಗೊಳಿಸಿದರೂ ಅಕ್ರಮವಾಗಿ ಕಿಯೋನಿಕ್ಸ್ ಪ್ರಾಂಚೈಜಿ ಮುಂದುವರೆಸಿದ ಆರೋಪ,
ಅದಕ್ಕೆ ಸಂಬಂದಿಸಿದ ದಾಖಲೆಗಳನ್ನು ಬೆಳಗಾವಿಯಲ್ಲಿ ನ್ಯಾಯವಾದಿ ರಾಜು ಶಿರಗಾಂವೆ ಬಿಡುಗಡೆ ಮಾಡಿದ್ದು,
ಉದ್ಯಮಿ ಲಕ್ಷ್ಮೀ ಶೆಟ್ಟಿ ಹಾಗೂ ಉದಯಕುಮಾರ ಶೆಟ್ಟಿ ವಿರುದ್ಧ ವಿರುದ್ಧ ಗಂಭೀರ ಆರೋಪವಿದ್ದು,
2023ರಲ್ಲಿಯೇ ಬೆಳಗಾವಿಯ ಶಾರ್ಪ ಕಂಪ್ಯೂಟರ್ ಸಂಸ್ಥೆಗೆ ಕಿಯೋನಿಕ್ಸ್ ನೀಡಿದ್ದ ಪ್ರಾಂಚೈಜಿ ರದ್ದುಗೊಳಿಸಲಾಗಿದೆ,
ಇಷ್ಟೇಲ್ಲಾ ಆದ್ರೂ ಕಿಯೋನಿಕ್ಸ್ ನಾಮಫಲಕ ತೆಗೆಸದೇ ದುರ್ಬಳಕೆ ಮಾಡಿರುವ ಆರೋಪ,
ಇನ್ನೂ ಉದಯಕುಮಾರ ಶೆಟ್ಟಿ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳ ಮಾಹಿತಿ,
ಕಿಯೋನಿಕ್ಸ್ ಎಂಡಿ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಸಂಸ್ಥೆಗೆ ಮೋಸ.
ಬೆಳಗಾವಿ ಕ್ಲಬ್ ಸದಸ್ಯನಾಗಲು ಕಿಯೋನಿಕ್ಸ್ ಸಂಸ್ಥೆಯ ಎ ಗ್ರುಪ್ ನೌಕಕರೆಂದು ಸುಳ್ಳು ದಾಖಲೆ ಸಲ್ಲಿಕೆ,
ಕಿಯೋನಿಕ್ಸ್ ಸಂಸ್ಥೆ ಪ್ರಾಂಚೈಜಿ ರದ್ದುಗೊಂಡರೂ ಅದರ ಹೆಸರು ದುರ್ಬಳಕೆ ಮಾಡಿ ಅನುದಾನ ಪಡೆದ ಆರೋಪ,
ಇಷ್ಟೆಲ್ಲಾ ಆರೋಪ ಹೊತ್ತಿರುವ ಈ ಶಾರ್ಪ್ ಕಂಪ್ಯೂಟರ್ ಸಂಸ್ಥೆಯು
ಕಿಯೋನಿಕ್ಸ್ ನಾಮಫಲಕವನ್ನು ತೆರವುಗೊಳಿಸದಿದ್ದರೆ ಜೂ.3ರಂದು ತಮಟೆ ಚಳುವಳಿಗೆ ನಿರ್ಧಾರ.
ಪ್ರತಿಭಟನೆಯಲ್ಲಿ ಜಿಲ್ಲೆಯ ದಲಿತ ಹಾಗೂ ಇನ್ನು ಹಲವಾರು ಸಂಘಟನೆಗಳು ಭಾಗಿಯಾಗಿ, ಅವರ ಸಂಸ್ಥೆಯ ಎದುರಿಗೆ ಬ್ರಹತ್ ಹೋರಾಟ ಮಾಡುತ್ತೇವೆ ಎಂದು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
