09/12/2025
IMG-20250529-WA0005

ನೇಸರಗಿ-29:ನಾಟಕಗಳಿಂದ ಸಾಮಾಜಿಕ ಕಳಕಳಿ ಕುರಿತು ಜನರಿಗೆ ತಿಳುವಳಿಕೆ ಮತ್ತು ಸ್ವಂತ ಗ್ರಾಮೀಣ ಪ್ರತಿಭಾವಂತರಿಂದ ನಟಿಸಲ್ಪಡುವ ಗ್ರಾಮೀಣ ಜನರ ಕಲೆಯನ್ನು ಹೊರಕ್ಕೆ ತರಲು ಜಾತ್ರೆಗಳಲ್ಲಿ ಸಾಮಾಜಿಕ ನಾಟಕ ಪ್ರಮುಖವಾಗಿ ಕಾರ್ಯ ಮಾಡುತ್ತಿದ್ದು, ಇದು ಆಧುನಿಕ ಕಾಲದಿಂದಲೂ ನಡೆದುಕೊಂಡು ಬಂದ ಕಲಾ ಸಂಪ್ರದಾಯ ಎಂದು ಮಾಜಿ ಶಾಸಕರು ಹಾಗೂ ಬೆಳಗಾವಿ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.

ಅವರು ಸಮೀಪದ ವಣ್ಣೂರ ಗ್ರಾಮದಲ್ಲಿ ಮೇ 23 ರಿಂದ ಪ್ರಾರಂಭವಾಗಿರುವ ಶ್ರೀ ಗ್ರಾಮದೇವತೆಯರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹಾ ತಾಯಿಯರ ಆಶೀರ್ವಾದ ಪಡೆದು ರಾತ್ರಿ 9-30 ಕ್ಕೆ ಸಾವಿರ ಹಳ್ಳಿಯ ಸರದಾರ ಅರ್ಧಾರ್ತ : ಧರ್ಮದ ದೊರೆ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜಾತ್ರಾ ಕಮಿಟಿ ಅಧ್ಯಕ್ಷರು, ಬೈಲಹೊಂಗಲ ಟಿ ಎ ಪಿ ಸಿ ಎಮ್ ಎಸ್ ಅಧ್ಯಕ್ಷರಾದ ಬಾಳಾಸಾಹೇಬ ದೇಸಾಯಿ ಮಾತನಾಡಿ ಮಳೆಯಲ್ಲಿಯೂ ಶ್ರೀ ಗ್ರಾಮದೇವತೆಯರ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತಿದ್ದು ಇದ್ದಕೆ ಸರ್ವ ಜನಾಂಗದ ಸಹಕಾರ ಕಾರಣ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾ ಪಂ ಸದಸ್ಯ ಬಸವರಾಜ ಅಂಗಡಿ, ಶೇಖರ ಬಶೆಟ್ಟಿ, ರವಿಗೌಡ ಪಾಟೀಲ, ವಿಶಾಲಗೌಡ ಪಾಟೀಲ, ಮಲ್ಲೇಶ ಹಳ್ಳೂರಿ, ನಾಗಪ್ಪ ಬಶೆಟ್ಟಿ, ಭೀಮಪ್ಪ ಸೋಮನಟ್ಟಿ, ಹೊನ್ನಾನಾಯ್ಕ ಪಾಟೀಲ, ಬಾಬು ಶೇಬನ್ನವರ, ರೇವಪ್ಪ ಗಾಣಿಗೇರ, ಈರಪ್ಪ ಹಳ್ಳೂರಿ, ಸಂಗಯ್ಯ ಬಾಗೋಜಿ, ಮಾರುತಿ ಕೆಳಗೇರಿ, ಬಸಪ್ಪ ಕುಲಕರ್ಣಿ, ವೀರಭದ್ರ ಬಡಿಗೇರ, ಪ್ರಕಾಶ ಗಿಡಗಿ,ಕಲ್ಮೇಶ ಕುಲಕರ್ಣಿ, ಗದಗಯ್ಯ ಹಿರೇಮಠ ಸೇರಿದಂತೆ ಗ್ರಾಮದ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು, ವನ್ನೂರ ಗ್ರಾಮಸ್ಥರು ಉಪಸ್ಥಿರಿದ್ದರು.

error: Content is protected !!