11/12/2025
IMG-20250528-WA0001

(ಉಗ್ರರ ದಾಳಿಯಲ್ಲಿ ಹುತಾತ್ಮರಾದವರ ದಿವ್ಯ ಆತ್ಮಕ್ಕೆ ಚಿರಶಾಂತಿ ಬಯಸಿ ನಿವೃತ್ತ ಹಿರಿಯ ಮುಖ್ಯ್ಯೊಪಾದ್ಯಾಯರು, ಚಿಂತನ ಶೀಲರು, ಸಾಹಿತಿಗಳಾದ, ಸರಳ ಬದುಕಿನ ಆದರ್ಶ ವ್ಯಕ್ತಿತ್ವದ ಮುತ್ನಾಳ ಗ್ರಾಮದ, ಸದ್ಯ ಸದ್ಯ ಶಿಂದೊಳ್ಳಿ ಗ್ರಾಮದ ನಿವಾಸಿಯಾಗಿರುವ ಶ್ರೀಯುತ ಅರುಣ ರಾವಜಿ ಕುಲಕರ್ಣಿಯವರಿಂದ ಅಷ್ಟೋತ್ತರ ಸೇವೆ, ಪೂಜೆ ಪುನಸ್ಕಾರ ನಡೆದವು ಆ ಕುರಿತು ವಿವರವಾದ ಲೇಖನ ಇದು)
ಅಶಾಂತಿಯಿಂದ ನೆಮ್ಮದಿ ಬಯಸಿ ಲೋಕ ಕಲ್ಯಾಣಾರ್ಥ ಮತ್ತು ಇತ್ತೀಚೆಗೆ ಜರುಗಿದ ಉಗ್ರರ ದಾಳಿಯಿಂದ ಹುತಾತ್ಮರಾದ ಭಾರತೀಯ ವೀರ ಯೋಧರು, ಮತ್ತು ಕಾಶ್ಮೀರದ ಪುಲ್ವಾಮಕ್ಕೆ ಪ್ರವಾಸಕ್ಕೆ ಹೋಗಿ ಅಮಾಯಕರಾಗಿ ಜೀವ ಕಳೆದುಕೊಂಡ ಸಾರ್ವಜನಿಕರ ಆತ್ಮಕ್ಕೆ ಚಿರಶಾಂತಿ ಕೋರಿ ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಶ್ರೀ ಅರುಣ ಕುಲಕರ್ಣಿ ಹಾಗೂ ಅವರ ಸುಪುತ್ರರ ಮುಂದಾಳತ್ವ ದಲ್ಲಿ ಅವರ ಮನೆಯಲ್ಲಿ ಶ್ರದ್ಧೆ ನಿಷ್ಠೆ, ಭಕ್ತಿ ಭಾವದಿಂದ ಮೊನ್ನೆ ಸೋಮವಾರ ದಿನಪೂರ್ತಿ ಮಂತ್ರಾಲಯದ ಪರಮ ಪೂಜ್ಯ ಶ್ರೀ ರಾಘವೇಂದ್ರ ರಾಯರ ಅಷ್ಟೋತ್ತರ ಪಾರಾಯಣವು ನಡೆಯಿತು.
ಕಾರ್ಯಕ್ರಮದಲ್ಲಿ ಈ ಪೂಜೆಯ ಕುರಿತು ಶ್ರೀ ಅರುಣ ಕುಲಕರ್ಣಿಯವರು ವಿವರಣೆ ನೀಡಿ “ಲೋಕ ಕಲ್ಯಾಣಾರ್ಥ ಮತ್ತು ನಮ್ಮ ದೇಶಕ್ಕೆ ಬಂದೆರಗಿದ ಸಂಕಟ ನಿವಾರಣೆಗಾಗಿ ಶ್ರೀ ಗುರುರಾಯರ ಅಷ್ಟೋತ್ತರ ಪಠಿಸ ಲಾಗಿದೆ ಎಲ್ಲೆಡೆ ಶಾಂತಿ ಲಭಿಸುವಂತೆ ಕರುಣಿಸಲಿ ಎಂದು ರಾಯರ ಬಳಿ ನಿವೇದನೆ ಮಾಡಲಾಗಿದೆ” ಎಂದು ತಾವು ಮಾಡಿಕೊಂಡ ಸಂಕಲ್ಪ ವನ್ನು ತಿಳಿಸಿದರು
ಬ್ರಾಹ್ಮಣ ಸಮುದಾಯದ ಹಿರಿಯ ಜೀವಿ ದೀರೇಂದ್ರಾಚಾರ್ಯ ಪಾಟೀಲರು ಈ ಪೂಜಾ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು,ಈ ಅಷ್ಟೋತ್ತರ ಪಠಣ ಕಾರ್ಯಕ್ರಮದಲ್ಲಿ ಖಾನಾಪುರ ತಾಲೂಕಿನ ಗಾಡಿಕೊಪ್ಪ ರಾಯರ ಮಠದ ಪ್ರಧಾನ ಅರ್ಚಕರಾದ ಅಚ್ಯುತಾಚಾರ್ಯ ಪಾಟೀಲ ಸೇರಿದಂತೆ ಶಿಂದೊಳ್ಳಿ ಹಾಗೂ ಅಕ್ಕ ಪಕ್ಕ ಗ್ರಾಮಗಳ ಬ್ರಾಹ್ಮಣ ಸಮುದಾಯದ ಬಾಂಧವರು ಭಾಗ ವಹಿಸಿದ್ದರು,ಶ್ರೀ ಅರುಣ ಕುಲಕರ್ಣಿ ಯವರ ಸುಪುತ್ರ ಶ್ರೀ ನಿತ್ಯಾನಂದ ಕುಲಕರ್ಣಿ ಯವರು ಪೂರ್ತಿ ಕಾರ್ಯಕ್ರಮದ ತಯಾರಿಯನ್ನು ಅಚ್ಚು ಕಟ್ಟಾಗಿ ಮಾಡಿ ಇತರರ ಮೆಚ್ಚುಗೆಗೆ ಪಾತ್ರ ರಾದರು.
ಈ ಕಾರ್ಯಕ್ರಮದಲ್ಲಿ ಗುರು ರಾಘವೇಂದ್ರ ರಾಯರ ಭಾವಚಿತ್ರಕ್ಕೆ ವಿಶೇಷ ಪೂಜೆ, ಮಂಗಳಾರತಿ ಜರುಗಿದವು, ಅಷ್ಟೋತ್ತರ ಪಠಿಸಿದ ಬಳಿಕ ಗುರು ರಾಘವೇಂದ್ರ ಮಹಾಸ್ವಾಮಿಗಳ ಕುರಿತು ವಿಶೇಷ ಉಪನ್ಯಾಸ,ಭಕ್ತಿ ಸಂಗೀತ ಸೇವೆ, ದಾಸರ ಪದಗಳ ಗಾಯನ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಶ್ರದ್ದೆ ಯಿಂದ ನಡೆದವು
ಧಾರ್ಮಿಕ ಸ್ವಭಾವದ, ಜೀವನದಲ್ಲಿ ಆದರ್ಶ ವ್ಯಕ್ತಿತ್ವದ, ಸರಳ ಸಜ್ಜನಿಕೆಯ, ಸ್ನೇಹ ಜೀವಿ, ಹಾಗೂ ನನ್ನ ಹಿತೈಷಿಗಳು ಮಾರ್ಗದರ್ಶಕರು, ಸಹೋದರ ಸಮಾನ ರಾದ ಶ್ರೀ ಅರುಣ ರಾವಜಿ ಕುಲಕರ್ಣಿಯವರು ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದವರು, ಸದ್ಯ ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಭಾಗ್ಯಶ್ರೀ ಯವರ ಸ್ವಗ್ರಾಮ ಶಿಂದೊಳ್ಳಿಯಲ್ಲಿ ನೆಲಸಿದ್ದಾರೆ ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ,ನಿವೃತ್ತ ಜೀವನ ವನ್ನು ಓದು.ಬರಹ. ಅಧ್ಯಯನ, ಧಾರ್ಮಿಕ ಸೇವೆಯಲ್ಲಿ ಜಪ ತಪ ಪೂಜೆ ಪುನಸ್ಕಾರ, ಭಜನೆ. ಸಾಧು ಸಂತರ ಒಡನಾಟದಲ್ಲಿ ಸೇವೆ ಮಾಡುತ್ತ ಅತ್ಯುತ್ತಮ ರೀತಿಯಲ್ಲಿ ಸಾರ್ಥಕ ಭಾವದಿಂದ ಕಳೆಯುತ್ತಿರುವರು, ನಿವೃತ್ತ ರಾದರೆ ಕೆಲವರು ಹತ್ತು ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉಲ್ಲಾಸ ಬದುಕು ಸಾಗಿಸುವವರಿ ದ್ದರೆ. ಹಲವರು ನಿವೃತ್ತ ರಾದರೆ ನಮ್ಮದೆಲ್ಲ ಜೀವನ ಮುಗಿದೆ ಹೋಯಿತು ಎಂದು ಭಾವಿಸುವವ ರಿಗೆ ಮಾದರಿಯಾಗಿದ್ದಾರೆ. ಏನಾದರೂ ಮಾಡು, ನಿರಂತರ ಕೆಲಸದಲ್ಲಿ ಕಾಲ ಕಳೆ ಎಂಬುದು ಇವರ ಸಂದೇಶ,
ಶ್ರೀ ಅರುಣ ರಾವಜಿ ಕುಲಕರ್ಣಿಯವರು ಶಾಲಾ ಶಿಕ್ಷಣ ಇಲಾಖೆಯಲ್ಲಿ 1982 ರಿಂದ ಶಿಕ್ಷಕರಾಗಿ, ಪದೋನ್ನತಿ ಪ್ರಧಾನ ಗುರುಗಳಾಗಿ, ನಂತರ ಹಿರಿಯ ಮುಖ್ಯ್ಯೊಪಾದ್ಯಾಯರು ರಾಗಿ 2023 ರ ವರೆಗೆ ಸೇವೆ ಸಲ್ಲಿಸಿದ್ದಾರೆ, ವಿದ್ಯಾರ್ಥಿಗಳ ಪ್ರಿಯ ಶಿಕ್ಷಕರು, ಕಲಿಸುವಲ್ಲಿ ಇವರು ಇತರರಿಗೆ ಮಾರ್ಗದರ್ಶಕರು, ತಮ್ಮ ಆದರ್ಶ ನಡೆನುಡಿಗಳಿಂದ ಅನೇಕ ಪ್ರಶಸ್ತಿಗಳಿಗೆ ಭಾಜನರಾದರು, ಉತ್ತಮ ಸಾಹಿತ್ಯ ರಚನೆ ಮಾಡಿ ಸಾಹಿತಿಗಳ ಗಮನ ಸೆಳೆದಿರುವರು.
ಅವರು ಬಡೇಕೊಳ್ಳಮಠದ ಶ್ರೀ ನಾಗೇಂದ್ರ ಮಹಾಸ್ವಾಮಿಗಳ ಪರಿಚಯದ ಉತ್ತಮ ಪುಸ್ತಕ ಹೊರತಂದಿರುವರು, ಎಲ್ಲರ ಅಮ್ಮ ಯಲ್ಲಮ್ಮ ತಾಯಿಯ ಪರಿಚಯದ ಕುರಿತು ಕನ್ನಡ ಪುಸ್ತಕವನ್ನು ಮಹಾರಾಷ್ಟ್ರ ದ ಭಕ್ತರ ಅನುಕೂಲಕ್ಕಾಗಿ ಮರಾಠಿ ಭಾಷೆಯಲ್ಲಿ ಅನುವಾದಿಸಿದ್ದಾರೆ. ಇಂಚಗೇರಿ ಸಂಪ್ರದಾಯ ದವರು ಹೊರ ತಂದಿರುವ ಶ್ರೀ ಲಕ್ಷ್ಮಣ ಚರಿತ ಮಾನಸ ಮರಾಠಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವರು, ಅದು ಉತ್ತಮ ಅನುವಾದಿತ ಕೃತಿ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ದತ್ತಿ ಪ್ರಶಸ್ತಿ ಪಡೆದಿದೆ, ಅದು ಅಭಿಮಾನ ಪಡುವ ಸಂಗತಿ ಯಾಗಿದೆ. ಜೊತೆಗೆ ಇನ್ನೂ ಬಹಳಷ್ಟು ಸಾಹಿತ್ಯ. ಕೃತಿ, ಬರವಣಿಗೆ ಯನ್ನು ಹೊರತಂದಿರುವರು, ಅವರೊಂದಿಗೆ ಹಿರೇಬಾಗೇವಾಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ, ಆವಾಗಿನ ಮಾರ್ಗದರ್ಶನ. ಅವರ ಕೆಲಸ ಕಾರ್ಯಗಳು ಇಂದು ನನಗೆ ಸೇವೆಯಲ್ಲಿ ಸಹಾಯಕವಾಗಿವೆ, ಜೊತೆಗೆ ಅವರು ಹಲವು ಕಡೆ ಮುಖ್ಯ್ಯೊ ಪಾದ್ಯಾಯ ರಾಗಿ ಸೇವೆ ಸಲ್ಲಿಸಿದ್ದಾರೆ, ಎಲ್ಲ ಕಡೆಯು ಉತ್ತಮ ಆಡಳಿತಗಾರ ರೆಂದು ಸಹ ಶಿಕ್ಷಕರ ಹಾಗೂ ಗ್ರಾಮಸ್ಥರ. ಪಾಲಕ. ಪೋಷಕರ ವಿದ್ಯಾರ್ಥಿಗಳ ಹೊಗಳಿಕೆಗೆ ಪಾತ್ರ ರಾಗಿರುವರು, ನನ್ನ ಹಾಗೂ ಅವರ 20 ಕ್ಕೂ ಹೆಚ್ಚು ವರ್ಷ ಗಳ ಆತ್ಮೀಯ ಒಡನಾಟದಲ್ಲಿ ಪರಸ್ಪರರ ಆತ್ಮೀಯ ಭಾವಕ್ಕೆ ಎಂದು ವಿರಸ ಬಂದಿಲ್ಲ, ಅವರು ಸರ್ವರ ಯಶಸ್ಸು ಬಯಸುವವರು, ಅವರು ಯಾರೊಂದಿಗೂ ವಾದ. ವಿವಾದ. ಭಿನ್ನಾಭಿಪ್ರಾಯ, ಜಗಳ ವೈಮನಸ್ಸು ಹೊಂದಿದವರಲ್ಲ, ಎಲ್ಲರೊಂದಿಗೆ ಆತ್ಮೀಯ ಒಡನಾಟ ಹೊಂದಿರುವವರು ಈ ಸಮಯದಲ್ಲಿ ಅವರಿಗೆ ಅವರ ಉತ್ತಮ ಕಾರ್ಯಕ್ಕೆ ಅಭಿನಂದನೆ ಧನ್ಯವಾದಗಳನ್ನು ಸಲ್ಲಿಸೋಣ 🙏🏻

IMG 20250528 WA0002 - IMG 20250528 WA0002

*ಬಸವರಾಜ ಫಕೀರಪ್ಪ ಸುಣಗಾರ. ಹಿರಿಯ ಮುಖ್ಯ್ಯೊಪಾ ದ್ಯಾಯರು, ಸದಾಶಿವನಗರ ಬೆಳಗಾವಿ*

error: Content is protected !!