11/12/2025
IMG-20250523-WA0034

ಮೂಡಲಗಿ-23 : ಪಟ್ಟಣದ ನಾಗಲಿಂಗ ನಗರ ನಿವಾಸಿ ಬಹುದಿನಗಳ ಬೇಡಿಕೆಯಾದ ಮೂಡಲಗಿ ಪಟ್ಟಣದ ಗುಲಾ೯ಪೂರ ಮುಖ್ಯ ರಸ್ತೆಯಿಂದ ನಾಗಲಿಂಗ ನಗರಕ್ಕೆ ಸಂಪರ್ಕ ಕೊಡುವ ಕೋಟ೯ ಪಕ್ಕದಲ್ಲಿರುವ ರಸ್ತೆಗಾಗಿ ಹಲವು ದಿನಗಳಿಂದ ನಾಗಲಿಂಗ ನಗರದ ನಿವಾಸಿಗಳ ಮುಖ್ಯ ಬೇಡಿಕೆಯಾಗಿತ್ತು. ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉನ್ನತ ಮಟ್ಟದ ಅಧಿಕಾರಿಗಳ ಜೋತೆ ಮಾತನಾಡಿ ಯಾರಿಗೂ ತೊಂದರೆ ಆಗದಂತೆ ರಸ್ತೆ ದುರಸ್ತಿಗೊಳಿಸಿ ಜನರಿಗೆ ಸಂಚರಿಸಲು ವ್ಯವಸ್ಥೆ ಕಲ್ಪಿಸಿಕೊಟ್ಟರು ಮೂಡಲಗಿ ಪುರಸಭೆ ವತಿಯಿಂದ ಮೂಲ ಭೂತ್ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸ್ಥಳದಲ್ಲಿಯೇ ಮುಖ್ಯಾಧಿಕಾರಿ ಅವರಿಗೆ ಸೂಚನೆ ನೀಡಿದರು. ಬರುವ ದಿನಗಳ ನಾಗಲಿಂಗ ನಗರದ ದೇವಸ್ಥಾನಗಳಿಗೆ ಅನುದಾನ ತರುತ್ತೆವೆ. ಈ ಭಾಗದಲ್ಲಿ ಮುಖ್ಯ ಬೇಡಿಕೆ ಈ ರಸ್ತೆ ಎಲ್ಲರ ಸಹಕಾರದಿಂದ ಸಮಸ್ಯೆಯನ್ನು ಬಗೆಹರಿಸಿ ಕೆಲಸ ಮಾಡಿದ್ದೆವೆ ನಿಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ನಮ್ಮ ಕಛೇರಿಗೆ ಬಂದು ಕೆಲಸ ಮಾಡಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಪುರಸಭೆ ರೇಣುಕಾ ಹಾದಿಮನಿ, ಮುಖ್ಯಾಧಿಕಾರಿ ತುಕಾರಾಮ ಮಾದರ, ಮೂಡಲಗಿ ಸಿ ಪಿ ಐ ಶ್ರೀಶೈಲ ಬ್ಯಾಕೂಡ್ , ಮಲ್ಲಿಕಾರ್ಜುನ್ ಯಕ್ಸಂಬಿ, ಮರೇಪ್ಪಾ ಮರೇಪ್ಪಗೋಳ, ಸಂತೋಷ ಸೋನವಾಲ್ಕರ, ಈರಪ್ಪಾ ಮುನ್ಯಾಳ, ಭೀಮಸಿ ಢವಳೇಶ್ವರ, ಲಕ್ಷ್ಮಣ ಅಡಿಹುಡಿ , ಸುಭಾಸ ಗೋಡ್ಯಾಗೋಳ, ಶ್ರೀಶೈಲ ಗಾಣಿಗೇರ, ಪ್ರಕಾಶ್ ಶೇಗುಣಸಿ , ರತ್ನಪ್ಪ ಬಗಾಡಿ , ಮುಂತಾದವರು ಹಾಜರಿದ್ದರು.

error: Content is protected !!