15/12/2025

ಬೆಳಗಾವಿ-21:ಕನ್ನಡ ಸಾಹಿತ್ಯದ ಸಂವೇದನಾಶೀಲ ಲೇಖಕಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿರುವುದು ಅತ್ಯಂತ ಖುಷಿಯ ಸಂಗತಿ. ಈ ಸಂದರ್ಭದಲ್ಲಿ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ‌ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

IMG 20250405 WA0004 - IMG 20250405 WA0004

https://www.facebook.com/share/p/1Bx9Y8kygc/

ಬಾನು ಅವರ ‘ಹಾರ್ಟ್ ಲ್ಯಾಂಪ್’ ಸಣ್ಣ ಕಥೆಗಳ ಸಂಕಲನದ ಮೂಲಕ ಮೊದಲ ಬಾರಿಗೆ ಕನ್ನಡ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ‌. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಎದೆಯ ಹಣತೆ’ಯನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಬಾನು ಮುಷ್ತಾಕ್ ಅವರ ಲೇಖನಿಯಿಂದ ಮತ್ತಷ್ಟು ಕೃತಿಗಳು ಮೂಡಿ ಬರಲಿ, ಸಾಹಿತ್ಯ ಸೇವೆಯ ಲೋಕದಲ್ಲಿ ಅವರು ಮತ್ತಷ್ಟು ಹೆಸರು ಮಾಡಲೆಂದು ಸಚಿವರು ಹಾರೈಸಿದ್ದಾರೆ.

error: Content is protected !!