ಮೂಡಲಗಿ-21: ಪಟ್ಟಣದ ಮದ್ಯ ಭಾಗದಲ್ಲಿ ಸದಾ ಕಿಕ್ಕಿರಿದು ತುಂಬಿರುತ್ತಿದ್ದ ಶ್ರೀ ಬಸವೇಶ್ವರ ವೃತ್ತ ವಾಹನ ಸಂಚಾರಕ್ಕೆ ಹಾಗೂ ಪಾದಾಚಾರಿಗಳಿಗೂ ಅಡೆತಡೆಯಾಗಿದ್ದ ವೃತ್ತವನ್ನು ಸುಗಮ ಸಂಚಾರದ ದೃಷ್ಟಿಯಿಂದ ವೃತ್ತದ ಮದ್ಯ ಭಾಗದಲ್ಲಿದ್ದ ಶ್ರೀ ಬಸವೇಶ್ವರ ಮೂರ್ತಿಯನ್ನು ಸೋಮವಾರದಂದು ಪಕ್ಕಕ್ಕೆ ಸ್ಥಳಾಂತರಿಸಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಪಟ್ಟಣದ ಎಲ್ಲ ಸಮಾಜದ ಅನೇಕ ಮುಖಂಡರು ಇದ್ದರು. ನಂತರ ಅನ್ನ ಪ್ರಸಾದ ಜರುಗಿತು.
