17/12/2025
IMG-20250517-WA0006

ಬೆಳಗಾವಿ-17: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಹ್ಯಾದ್ರಿ ನಗರದ ಜಂಕ್ಷನ್ ಗಳ ಹಾಗೂ ಸಂಪರ್ಕ ರಸ್ತೆಗಳ ಸುಧಾರಣೆಯ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಸುಮಾರು 4.90 ಕೋಟಿ ರೂ. ವೆಚ್ಚದಲ್ಲಿ ಜಂಕ್ಷನ್ ಗಳ ಹಾಗೂ ಸಂಪರ್ಕ ರಸ್ತೆಗಳ ಕಾಮಗಾರಿ ನಡೆಯಲಿದೆ. ಮಹಾಬಳೇಶ್ವರ ದೇವಸ್ಥಾನ ಹಾಗೂ‌ ಮಹಾಲಕ್ಷ್ಮೀ ದೇವಸ್ಥಾನ ಹತ್ತಿರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ವಿಶೇಷ ಪ್ರಯತ್ನದಿಂದ ಸಚಿವರು ಅನುದಾನ ಮಂಜೂರು ಮಾಡಿಸಿದ್ದು, ವಿಶಾಲವಾಗಿರುವ ಸಹ್ಯಾದ್ರಿ ನಗರದ ಸೌಂದರ್ಯೀಕರಣ ಮತ್ತು ಅಭಿವೃದ್ಧಿಗೆ ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತೊಡಕಲಕಟ್ಟಿ, ಮುಸ್ತಾಕ್ ಮುಲ್ಲಾ, ವನಿತಾ ಗೊಂದಳಿ, ಸಂಗೀತಾ, ಪಿಕೆ ಪಾಟೀಲ, ಹಿರೇಮಠ್, ಸುರೇಶ ಜಡಗಿ, ಬಸವರಾಜ ಡೂಗನವರ್, ಸಂಜೀವ್ ದೇಸಾಯಿ ಇತರರು ಹಾಜರಿದ್ದರು.

error: Content is protected !!