ಬೆಳಗಾವಿ-19:ಬೆಳಗಾವಿ ತಾಲೂಕಿನ ಶಿಂಧೊಳಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವನ್ನು ಏ.22 ರಿಂದ ಏ.30ರ ವರೆಗೆ ಶ್ರೀ ಮಹಾಲಕ್ಷ್ಮೀ, ಶ್ರೀ ದುರ್ಗಾದೇವಿ ಹಾಗೂ ಶ್ರೀ ಮಸಣಾದೇವಿಯರ ಜಾತ್ರಾ ಮಹೋತ್ಸವ 14 ವರ್ಷದ ಬಳಿಕ ನಡೆಯಲಿದೆ ಎಂದು ನಿಲಜಿ ಗ್ರಾಪಂ ಅಧ್ಯಕ್ಷ ಸತೀಶ್ ಶಹಾಪುರಕರ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಏ.22 ರಂದು ಬಡೇಕೊಳ್ಳಮಠದ ಶ್ರೀ ನಾಗೇಂದ್ರ ಸ್ವಾಮೀಜಿ ಸಾನಿದ್ಯ ವಹಿಸಲಿದ್ದಾರೆ. ನೂತನ ದೇವಸ್ಥಾನದ ಕಟ್ಟಡವನ್ನು ಸಂಸದ ಜಗದೀಶ್ ಶೆಟ್ಟರ್ ನೆರವೆರಿಸಲಿದ್ದಾರೆ ಎಂದರು.
ಏ.23 ರಂದು ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದ ರಥೋತ್ಸವ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆ ನೀಡಲಿದ್ದಾರೆ. ಸಾನಿದ್ಯವನ್ನು ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಏಕನಾಥ ಅಗಸಿಮನಿ, ರಾಜು ಪಾಟೀಲ್, ಸುರೇಶ ಪಾಟೀಲ, ಬಾಬಾಗೌಡ ಪಾಟೀಲ್, ಎ.ಎ.ಸನದಿ, ಫಿರಾಜಿ ಅನಗೋಳ್ಕರ್, ಲಕ್ಷ್ಮಣ, ಸೇರಿದಂತೆ ಇನ್ನಿತರರು ಹಾಜರಿದ್ದರು.
