
ಮೂಡಲಗಿ-12 : ಇಲ್ಲಿನ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮಿದೇವಿಯ
ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಲಕ್ಷ್ಮಿದೇವಿ ವಿಶೇಷ ಭಕ್ತಿ ಗೀತೆಯ ಹಾಡಿನ ಆಡಿಯೋ ಬಿಡುಗಡೆ ಶುಕ್ರವಾರ ರಂದು ಸಂಜೆ ದೇವಸ್ಥಾನ ಆವರಣದಲ್ಲಿ ಜರುಗಿತು.
ಈ ಭಕ್ತಿಗೀತೆಯ ಸಾಹಿತ್ಯ ಪ್ರಕಾಶ ಗೋಕಾಕ ಬರೆದಿದ್ದು ಯೇಸು ಸಣ್ಣಕ್ಕಿ ಹಾಡಿದ್ದಾರೆ. ಧ್ವನಿ ಮುದ್ರಣ ಮೂಡಲಗಿಯ ಶ್ರೀ ರೇಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ರುದ್ರಪ್ಪಾ ವಾಲಿ, ಮಲ್ಲಿಕಾರ್ಜುನ ಢವಳೇಶ್ವರ, ಗಿರೀಶ ಢವಳೇಶ್ವರ, ಬಸವರಾಜ ತೇಲಿ, ಜಾತ್ರಾ ಕಮೀಟಿಯ ಈರಣ್ಣಾ ಸತರಡ್ಡಿ, ಪ್ರದೀಪ ಪೂಜೇರಿ, ಈಶ್ವರ ಢವಳೇಶ್ವರ ಮಹಾಂತೇಶ ಖಾನಾಪೂರ, ಉದಯ ಬಡಿಗೇರ, ವಿಕಾಸ ಮದಗನ್ನವರ, ಬಸವರಾಜ ಬಡಗನ್ನವರ, ಅಜಪ್ಪಾ ಜರಾಳೆ, ಪ್ರಕಾಶ ಗೋಕಾಕ, ಯೇಸು ಸಣ್ಣಕ್ಕಿ ಇವರನ್ನು ಸತ್ಕರಿಸಲಾಯಿತು. ಮಂಜುನಾಥ ರೇಳೆಕರ, ಆನಂದ ಕೊಳವಿ ಅನೇಕರು ಉಪಸ್ಥಿತರಿದ್ದರು.