
ಬೆಳಗಾವಿ-10: ಜನಪರ ಚಿಂತಕರಾದ ಸನದಿ ಅವರು ತಮ್ಮ ಸಂಪರ್ಕದಲ್ಲಿ ಬರುವ ಎಲ್ಲರಿಗೂ ಮಾರ್ಗದರ್ಶಕರಾಗಿ ಸಹಾಯ ಮಾಡುತ್ತ, ಪರರು ಬೆಳೆಯುವುದನ್ನು ಕಂಡು ಸಂತೋಷಪಡುವವರು. ಸಮಾಜಮುಖಿಯಾದ ಅವರ ಸಾಮಾಜಿಕ ಸೇವೆ ಪ್ರಶಂಸಾರ್ಹವಾದುದು. ಸನದಿ ಅವರ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಆಡಳಿತಾತ್ಮಕ ಸೇವೆ ಅನನ್ಯವಾದುದು ಎಂದು ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀ. ಶ್ರೀಪಾಲ ಖೇಮಲಾಪುರೆ ಅವರು ಹೇಳಿದರು. ಅವರು ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ, ಮುಖ್ಯಾಧ್ಯಾಪಕರಾಗಿ, ಆಡಳಿತಾಧಿಕಾರಿಯಾಗಿ 45 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಾಹಿತಿ ಶ್ರೀ. ಎ. ಎ. ಸನದಿ ಅವರ ಬೀಳ್ಕೊಡುಗೆ ಸಮಾರಂಭದ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.
ಸಂಸ್ಥೆಯ ನಿರ್ದೇಶಕರಾದ ಶ್ರೀ. ಆರ್. ಪಿ. ರಾಮಗೊಂಡಾ ಅಧ್ಯಕ್ಷತೆ ವಹಿಸಿದ್ದರು.
ಶ್ರೀ. ಭರತೇಶ ಮಾರನಬಸರಿ,ಶ್ರೀಮತಿ ಸವಿತಾ ಹಚ್ಚಿಬಟ್ಟಿ, ಅಪರ್ಣಾ ಪಾಟೀಲ ಸಾಂದರ್ಭಿಕವಾಗಿ ಮಾತನಾಡಿದರು. ಶ್ರೀಮತಿ ಸುಧಾ ಪಾಟೀಲ ಪಾರ್ಥಿಸಿದರು. ಶ್ರೀಮತಿ ಅಶ್ವಿನಿ ಹಂಪಯ್ಯ ನಿರೂಪಿಸಿದರು. ಶ್ರೀಮತಿ ಸುನೀತಾ ಗಣೆ ವಂದಿಸಿದರು.