
ದಿನಾಂಕ 08/04/2025 ರಂದು ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ದೇವಗಾವ ಗೆ Makeen Energy India Private limited Corporate social responsibility Programme 2024-25 ರ ಅಡಿಯಲ್ಲಿ ಅಂದಾಜು 5 ಲಕ್ಷ ಮೌಲ್ಯದ ವಸ್ತುಗಳನ್ನು ದೇಣಿಗೆ ನೀಡಿ ಹಳ್ಳಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ
Makeen Energy Private limited ವತಿಯಿಂದ ಗಣಕಯಂತ್ರಗಳು, ಶಾಲಾ ಬ್ಯಾಗಗಳು, ತೂಕದ ಯಂತ್ರ ಗ್ರಂಥಾಲಯಕ್ಕೆ ಉಪಯೋಗಿಸುವ ಪುಸ್ತಕಗಳು, ಗ್ರೀನ್ ಬೋರ್ಡ್ ಗಳನ್ನು ದೇಣಿಗೆ ನೀಡಿರುತ್ತಾರೆ
ಸದರಿ ಕಾರ್ಯಕ್ರಮದಲ್ಲಿ ಬೇಲೂರು Makeen Energy ಕಂಪನಿಯ ಅಧಿಕಾರಿಗಳಾದ ಶ್ರೀ ವಿನೋದ್ ಪಾಟೀಲ್, ಶ್ರೀ ಶ್ರೀನಿವಾಸ್, ಹಾಗೂ ಈರಣ್ಣ ಬಡಿಗೇರ್ ತಂತ್ರಜ್ಞಾನದ ಮಹತ್ವ ತಿಳಿಸಿದರು ತಂತ್ರಜ್ಞಾನದ ಬಳಕೆಯೊಂದಿಗೆ ಶಿಕ್ಷಣ ಪಡೆಯುವಂತೆ ಪ್ರೇರಣೆ ನೀಡಿದರು. ಮತ್ತು Makeen ಕಂಪನಿಯ ಮುಖ್ಯಸ್ಥರು ವಿಡಿಯೋ ಕಾಲ್ ನಲ್ಲಿ ಮಕ್ಕಳೊಂದಿಗೆ ಮಾತನಾಡಿ ಶುಭಕೋರಿ ಮಕ್ಕಳನ್ನು ವಜ್ರಕ್ಕೆ ಹೋಲಿಸಿದರು.
ದೇವಗಾoವ ಗ್ರಾಮದ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪುನೀತ್ ಕೊರವನವರ ಪರಿಶ್ರಮದಿಂದ ಶಾಲೆಯ ಅಭಿವೃದ್ಧಿ ಪೂರಕವಾಗುವ ಸಾಮಗ್ರಿ ಒದಗಿಸಲು ಶ್ರಮಿಸಿದ್ದಾರೆ.
ಸದರಿ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ಬೈಲೂರು CRP ಗಳಾದ ಶ್ರೀ ಸಂಜೀವ್ ಹುಬ್ಬಳ್ಳಿ ಅವರು ಹಾಜರಿದ್ದು ಕಂಪನಿಯನ್ನು ಶ್ಲಾಘಿಸಿದರು. ಜೊತೆಯಲ್ಲಿ ಶಾಲಾ ಮುಖ್ಯ ಗುರುಗಳಾದ ಶ್ರೀ S L ಪೋಳ ಮತ್ತು ಶಿಕ್ಷಕ ಶಿಕ್ಷಕಿಯರು ಗ್ರಾಮದ ಯುವಕರು ಹಾಜರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಭರತ ಗಂಧಿಗವಾಡ ಮತ್ತು ಶ್ರೀ ಬಸವರಾಜ ಮುಪ್ಪಿನಮಠ ಹಾಜರಿದ್ದರು ಯುವಕರಾದ ಶ್ರೀ ರವಿ ಪತ್ತಾರ್, ಶ್ರೀ ಕಿರಣ್ ಕೋಟಗಿ, ಶ್ರೀ ಅಕ್ಷಯ್ ಧೂಳಪ್ಪನವರ್, ಶ್ರೀ ಈರಣ್ಣ ದಾಸ್ತಿಕೊಪ್ಪ, ಶ್ರೀ ಲಿಂಗರಾಜ್ ಕಡೆಮನಿ, ಶ್ರೀ ಶಿವು ಮಡಾಕರ್ ಹಾಜರಿದ್ದರು
MAKEEN ಕಂಪನಿಯವರಿಗೆ ಶಿಕ್ಷಕರ ಬಳಗ ಮತ್ತು ಮುಖ್ಯ ಶಿಕ್ಷಕರು ಹೃದಯಪೂರ್ವಕ ಅಭಿನಂದನೆ ಅರ್ಪಿಸಿದರು.