
ಉಪೇಂದ್ರ ಅವರ UI ಹವಾ ಆಯ್ತು ಈಗ ಶ್ರೀ ದುರ್ಗಾ ಫಿಲಂಸ್ ಅರ್ಪಿಸುವ ಉತ್ತರಕರ್ನಾಟಕದ ಪ್ರತಿಭೆ, ಕರೆಪ್ಪ ಮಲ್ಲೂರವರ ಕನಸಿನ ಕೂಸು
ಯು.ಬಿ(UB) ಚಿತ್ರ ಸೆಟ್ಟೇರಿದೆ….
ಪ್ರಿ ಪ್ರೊಡಕ್ಷನ್ ವರ್ಕ್ ಮುಗಿದಿದ್ದು, ಕಲಾವಿದರ ಆಯ್ಕೆ ನಡೆಯುತಿದ್ದು.. ಮುಂದಿನ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ..
ಇದು ಒಂದು ಅಪ್ಪಟ ಹಳ್ಳಿ ಮುಗ್ದ ಹುಡುಗನ ಜೀವನದಲ್ಲಿ ,ಹಳ್ಳಿಯಲ್ಲಿ ನಡೆಯುವ ಘಟನೆಗಳನ್ನು ಆಧರಿಸಿರುವ ಸಿನಿಮಾ ಇದಾಗಿದೆ… ಸಿನಿಮಾ ಕಥೆಯೇ ಇದರ ಜೀವಾಳ ಒಂದು ಹಸು ಪ್ರಮುಖ ಪಾತ್ರವನ್ನು ವಹಿಸಿದೆ.. ಮುಖ್ಯವಾಗಿ ಇದು ನಮ್ಮ ನಿಮ್ಮ ಊರಿನಲ್ಲಿ ನಡೆಯುವಂತೆ ನೈಜತೆಯನ್ನು ಹೊಂದಿದೆ… ಸಿನಿಮಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ, ಸಾಂಗ್ಸ್ , ಫ಼ೈಟ್, ಲವ್ ಕಾಮಿಡಿ , ಫ಼್ಯಾಮಿಲಿ ಸೆಂಟಿಮೆಂಟ್,ಹಳ್ಳಿ ರಾಜಕೀಯ, ಕಾನೂನು ವ್ಯವಸ್ಥೆ, ಮಂಗಳಮುಖಿಯರು ವಿಶೇಷ ಪಾತ್ರ ಇದೆ.
ಜೊತೆಗೆ ಚಿತ್ರದ ನಿರ್ದೇಶಕರು ಸಹ ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತಿದ್ದಾರೆ…
ಹಳ್ಳಿ ಸೊಗಡಿರುವಂತಹ, ನೈಜತೆಗೆ ಹತ್ತಿರವಾಗಿದ್ದು, ಮನಮುಟ್ಟುವಂತಿದೆ ಚಿತ್ರಕಥೆ..
ಖಂಡಿತವಾಗಿ 100% ಮನರಂಜಾನಾ ಚಿತ್ರ, ಪೂರ್ತಿ ಪೈಸಾವಸೂಲ್ ಸಿನಿಮಾ ಎಂಬುದು ನಿರ್ದೇಶಕರ ಮಾತು.
ಹಲವಾರು ಕಿರುಚಿತ್ರ,ಟೆಲಿಚಿತ್ರ ನಿರ್ಮಿಸಿ,ನಿರ್ದೇಶಿಸಿ ಅನುಭವ ಹೊಂದಿದ್ದಾರೆ ನಿರ್ದೇಶಕರು…
ಕಥೆ-ಚಿತ್ರಕಥೆ-ನಿರ್ದೇಶನ-ಕರೆಪ್ಪ ಮಲ್ಲೂರ,
ಸಂಭಾಷಣೆ-ಸತ್ಯಕಹಿ, ಸಂಗೀತ- ಛಾಯಾಗ್ರಹಣ, ಇತ್ಯಾದಿ ಪೋಸ್ಟ್ ಪ್ರೊಡಕ್ಷನ್ಸ್ ಉತ್ತಮ ತಂತ್ರಜ್ಞರು ನಿರ್ವಹಿಸುತಿದ್ದಾರೆ…