15/12/2025
IMG-20250327-WA0000

ಮೂಡಲಗಿ-27 : ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಕಟ್ಟುನಿಟ್ಟಾದ ಉಪವಾಸ ವ್ರತ ಪಾಲಿಸುತ್ತಾರೆ. ಮೂಡಲಗಿಯ 5 ವರ್ಷದ ಬಾಲಕಿ ದೊಡ್ಡವರೊಂದಿಗೆ ಒಂದು ದಿನ ಉಪವಾಸ ಮಾಡುವ ಮೂಲಕ ಗಮನಸೆಳೆದಿದ್ದಾಳೆ.

ಮೂಡಲಗಿ ಪಟ್ಟಣದ ಗಾಂಧಿ ಚೌಕ ನಿವಾಸಿ, ಬಿ ಟಿ ಟಿ ಕಮೀಟಿ ಪ್ರಭಾರಿ ಅಧ್ಯಕ್ಷ ಅವರ ಪುತ್ರಿ ಗೌಶಿಯಾ ಮಲೀಕಜಾನ ಕಳ್ಳಿಮನಿ ( 5) ರಂಜಾನ್ ಪ್ರಯುಕ್ತ ಉಪವಾಸ ಕೈಗೊಂಡಿದ್ದಾರೆ. ಎಲ್ ಕೆಜಿ ಓದುತ್ತಿರುವ ಗೌಶಿಯಾ ರಂಜಾನ್ ವೇಳೆ ಒಂದು ದಿ‌ನ ಉಪವಾಸ ಆಚರಿಸಿದ್ದಳು.

ಮಗಳು ಗೌಶಿಯಾ ಉಪವಾಸ ಕಂಡು ಮನೆಯವರು ಸಹ ಹೆಮ್ಮೆ ಪಡುತ್ತಿದ್ದಾರೆ. ಗೌಶಿಯಾ ಸಾವ೯ಜನಿಕರು ಕಠಿಣ ಉಪವಾಸಕ್ಕೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

*ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿಯ ತಂದೆ ಮಲೀಕ ಜಾನ್ ಕಳ್ಳಿಮನಿ, ಮಗಳ ಬಗ್ಗೆ ನನಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ಹೆಮ್ಮೆ ಇದೆ. ಊರಿನ ಜನರು ಗೌಶಿಯಾ ಬಗ್ಗೆ ಹೆಮ್ಮೆಪಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ’ ಎಂದು ಹೇಳಿದರು*.

error: Content is protected !!