11/12/2025

ಬೆಳಗಾವಿ-16:ಕೈವಾರ ತಾತಯ್ಯನವರು ಕನ್ನಡ, ತೆಲುಗು, ಸಂಸ್ಕೃತ ಹಾಗೂ ವಿವಿಧ ಭಾಷೆಗಳನ್ನು ಬಲ್ಲವರಾಗಿದ್ದರು. ಹರಿ ನಮೋ ನಾರಾಯಣಾಯ ಎಂದುಕೊಂಡು ತಮ್ಮ ಜೀವಿತ ಅವಧಿಯಲ್ಲಿ ಹಲವಾರು ಪವಾಡಗಳನ್ನು ಮಾಡಿದ್ದರು ಎಂದು ಬೆಳಗಾವಿ ಬಲಿಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಮಾರುತಿ ತೇಲಂಗ(ನಾಯ್ಡು) ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಭಾನುವಾರ (ಆಯೋಜಿಸಲಾಗಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ವಿವರಿಸಿದರು.

ಕೈವಾರ ತಾತಯ್ಯನವರು 17 ನೇ ಶತಮಾನದವರು ಇವರು ತಮ್ಮ ಜೀವಿತ ಅವದಿಯಲ್ಲಿ ಹಲವಾರು ಪವಾಡಗಳನ್ನು ಮಾಡಿದ್ದಲ್ಲದೇ ಪರಿಸರ ಪ್ರೇಮಿಗಳಾಗಿದ್ದ ಅವರು, ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಯಂತ ಗೊಂದಾವಳಿ , ಸತೀಶ ಗುಡಮೇಲ, ಗೋವಿಂದ ನಾಯ್ದು, ಹಾಗೂ ಬಸವರಾಜ ಹೂಗಾರ, ಅಶ್ವಿನಿ ತೆಲಂಗ, ಸನತ ನಾಯ್ಡು, ಅನಂತಕುಮಾರ ಬ್ಯಾಕೂಡ ಹಾಗೂ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಡಿದ್ದರು.

error: Content is protected !!