14/12/2025


ಬೆಳಗಾವಿ-12:ಬೆಳಗಾವಿ ನಗರದಲ್ಲಿ ಭಾನುವಾರದಂದು ನಡೆದ ರನ್ ಫಾರ್ ಪಿಸ್ ಅಭಿಯಾನದಲ್ಲಿ ಪೋಲೀಸರ ಜೊತೆ ಸಮಾಜ ಸೇವಕ ಆಕಾಶ ಹಲಗೇಕರ ಇವರಿಂದ ಪೊಲೀಸ್ ಇಲಾಖೆ ಮತ್ತು ಅವರ ಸಾಮಾಜಿಕ ಕಾಳಜಿ ಬಗ್ಗೆ ನಾಮಫಲಕದ ಉದ್ಘಾಟನೆ ಮಾಡುವ ಜನರಿಗೆ ಜಾಗೃತಿ ಮುಡಿಸಲಾಯಿತು. ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಪೊಲೀಸ್ ಸಹಾಯವಿಲ್ಲದೆ ಯಾವ ಕಾರ್ಯಕ್ರಮಗಳು ಕೂಡ ಸುಗಮವಾಗಿ ನಡೆಯುವುದಿಲ್ಲ.ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಲ್ಲಿ ಇವರ ಸಹಯೋಗ ತುಂಬಾ ವಿರುತ್ತದೆ.ರಸ್ತೆಯಲ್ಲಿ ಅಪಘಾತವಾದಗ ತಡ ಮಾಡದೆ ಬಂದು ಕಾಪಾಡುವವರು, ಜಾತ್ರೆ ರಥೋತ್ಸವಗಳಿಗೆ ಶಾಂತತೆಯನ್ನು ಕಾಪಾಡುವವರು,ಸಂಘ ಸಂಸ್ಥೆಗಳು, ಸಂಘಟನೆಗಳ ಹೋರಾಟಕ್ಕೆ ರಕ್ಷಣೆ ನೀಡುವವರು.
101 ರ ನಂಬರ್ ಗೆ ಕರೆಮಾಡಿದರೆ ಸಾವಿರ ಸಮಸ್ಯೆಗಳಿಗೆ ಪರಿಹಾರ ನೀಡುವ ಏಕೈಕ ಇಲಾಖೆ ನಮ್ಮ ಪೊಲೀಸ್ ಇಲಾಖೆ.
ಕಾನೂನನ್ನು ಯಾರು ಗೌರವಿಸುತ್ತಾರೋ ಅವರನ್ನು ಪೊಲೀಸ್ ಇಲಾಖೆ ಅವರನ್ನು ಗೌರವಿಸುತ್ತದೆ ಎಂದು
ಸಮಾಜ ಸೇವಕ ಆಕಾಶ ಹಲಗೇಕರ ಹೇಳಿದರು ಇದೆ ಸಂದರ್ಭದಲ್ಲಿ ನಗರದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!