14/12/2025
IMG-20250309-WA0005

ಬೆಳಗಾವಿ-09: ಪಿಎಂಶ್ರೀ ಶಾಲಾ ಶಿಕ್ಷಕರ ತರಬೇತಿ
ಕೇಂದ್ರ ಪುರಸ್ಕೃತ ಪಿಎಂಶ್ರೀ ಯೋಜನೆಗೆ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಿಂದ ಮೊದಲ ಹಂತದಲ್ಲಿ ಆಯ್ಕೆಯಾಗಿರುವ ಶಾಲೆಗಳ ಶಿಕ್ಷಕರಿಗೆ ಐದು ದಿನಗಳ ನೀಡ್ ಬೇಸ್ಡ ತರಬೇತಿಯನ್ನು ಎರಡು ಹಂತಗಳಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಳಗಾವಿ ವತಿಯಿಂದ ಆಯೋಜಿಸಲಾಯಿತು.
ಮೊದಲ ಹಂತದ ತರಬೇತಿಯನ್ನು ದಿನಾಂಕ 27-02-2025 ರಿಂದ 03-03-2025 ರ ವರೆಗೆ ಒಟ್ಟು 7 ಪಿಎಂಶ್ರೀ ಶಾಲೆಗಳ ಒಟ್ಟು 34 ಶಿಕ್ಷಕರು ಹಾಗೂ ಎರಡನೇ ಹಂತದ ತರಬೇತಿಯನ್ನು ದಿನಾಂಕ 04-03-2025 ರಿಂದ 08-03-2025 ರ ವರೆಗೆ ಒಟ್ಟು 30 ಶಿಕ್ಷಕರಿಗೆ ನೀಡಲಾಯಿತು.

ದಿನಾಂಕ 27-02-2025 ರಂದು ಬಸವರಾಜ ನಾಲತ್ತವಾಡ, ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕರು (ಅಭಿವೃದ್ಧಿ) ಅವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಶಿಕ್ಷಕರು ತರಬೇತಿಯ ಅಂಶಗಳನ್ನು ಶಾಲೆಯಲ್ಲಿ ಬಳಸುವ ಮೂಲಕ ಯೋಜನೆಯ ಪರಿಣಾಮಕಾರಿ ಜಾರಿಗೆ ಶ್ರಮಿಸುವಂತೆ ತಿಳಿಸಿದರು.

ಪಿಎಂಶ್ರೀ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ತರಬೇತಿ ನೋಡಲ್ ಅಧಿಕಾರಿ ಕಲ್ಮೇಶ ಸುಣಧೋಳಿ ಅವರು ಈ ತರಬೇತಿಯಲ್ಲಿ ಸಕ್ರೆಪ್ಪಗೌಡ ಬಿರಾದಾರ, ಜಂಟಿ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ,ಎಮ್ ಎಮ್ ಸಿಂಧೂರ
ವಿಶ್ರಾಂತ ಜಂಟಿ ನಿರ್ದೇಶಕರು, ಶರೀಫಸಾಹೇಬ ನದಾಫ, ಹಿರಿಯ ಉಪನ್ಯಾಸಕರು, ಡಯಟ್, ಬೆಳಗಾವಿ
ಭಾರತಿ ದಾಸೋಗ, ಉಪನ್ಯಾಸಕರು ಡಯಟ್, ಬೆಳಗಾವಿ
ಡಾ. ರಾಜಶೇಖರ ಛಳಗೇರಿ, ಮುಖ್ಯೋಪಾಧ್ಯಾಯರು, ಕೆಪಿಎಸ್, ರಾಮತೀರ್ಥನಗರ, ಬೆಳಗಾವಿ, ಉಮೇಶ ಚಿನ್ನಪ್ಪಗೌಡರ, ಯು ಡಿ ಹುನಕುಪ್ಪಿ, ಹಿರಿಯ ಉಪನ್ಯಾಸಕರು ವಿಶೇಷ ಉಪನ್ಯಾಸಗಳನ್ನು ನೀಡುವಂತೆ ಯೋಜನೆ ರೂಪಿಸಿದ್ದರು.

ತರಬೇತಿ ಸಂಪನ್ಮೂಲ ವ್ಯಕ್ತಿಗಳಾಗಿ ಎನ್ ಆರ್ ಮೆಳವಂಕಿ, ಪಿಎಂಶ್ರೀ ಶಾಲೆ ರಾಮತೀರ್ಥ ನಗರ, ಬೆಳಗಾವಿ, ಪರಶುರಾಮ ಸೊಂಟಕ್ಕಿ, ಪಿಎಂಶ್ರೀ ಶಾಲೆ, ನಯಾನಗರ, ಅಂಥೋನಿ ಕೆ ಜೆ, ಪಿಎಂಶ್ರೀ ಅಶೋಕ ನಗರ ಹಾಗೂ ಉಮೇಶ್ವರ ಮರಗಾಲ, ಪಿಎಂಶ್ರೀ ಶಾಲೆ, ಕುನ್ನಾಳ ಭಾಗವಹಿಸಿದ್ದರು.

error: Content is protected !!