ಬೆಳಗಾವಿ-09: ದಿ ಬೆಳಗಾವಿ ಜಿಲ್ಲಾ ಭೋವಿರಾಜ ಫಿಶರೀಜ ಕೋ-ಆಫ್ ನಿ. ಬೆಳಗಾವಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಸದಸ್ಯರ ಸಭೆಯನ್ನು ನಡೆಸಲಾಯಿತು.

ಸದರಿ ಸಭೆಯಲ್ಲಿ ಸದಸ್ಯರ ಒಮ್ಮತದೊಂದಿಗೆ ಶ್ರೀ ವಿಜಯ ಹಲಕರ್ಣಿ ಅವರನ್ನು ಸಂಘದ ಅಧ್ಯಕ್ಷರಾಗಿ ಹಾಗೂ ಶ್ರೀ ಆನಂದ ಭಂಡಾರಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಆಯ್ಕೆಯ ಮೂಲಕ ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಹೊಸ ನೇತೃತ್ವವಿಗೆ ಅವಕಾಶ ನೀಡಿದೆ.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರು, ಮುಖಂಡರು ಮತ್ತು ಮೀನುಗಾರ ಸಹೋದ್ಯೋಗಿಗಳು ಹೊಸ ನೇತೃತ್ವಕ್ಕೆ ಶುಭಾಶಯಗಳನ್ನು ತಿಳಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸಂಘದ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
–
ದಿ ಬೆಳಗಾವಿ ಜಿಲ್ಲಾ ಭೋವಿರಾಜ ಫಿಶರೀಜ ಕೋ-ಆಫ್ ನಿ. ಬೆಳಗಾವಿ
