12/12/2025
IMG-20250307-WA0001

ಬೆಳಗಾವಿ-07: ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ಸುಳ್ಳು ಗ್ಯಾರಂಟಿಗಳ ಭರವಸೆಯನ್ನು ಕೊಟ್ಟು ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯ ವರೆಗೆ ಯಾವುದೇ ಗ್ಯಾರಂಟಿಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪುತ್ತಿಲ್ಲ. ರಾಜ್ಯದಲ್ಲಿ ಒಂದು ನಯಾ ಫೈಸೆ ಅಭಿವೃದ್ಧಿ ಕೆಲಸವನ್ನು ಮಾಡದೆ ಇರುವುದರಿಂದ ರಾಜ್ಯದ ಜನತೆಯು ಸರಕಾರಕ್ಕೆ ಛೀಮಾರಿ ಹಾಗುತ್ತಾದ್ದಾರೆ, ತಮ್ಮ ಪಕ್ಷದ ಶಾಸಕರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿ ಓಡಾಡದಂತೆ ಪರಿಸ್ಥಿತಿ ಯಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯವನ್ನು ಸಂಪೂರ್ಣವಾಗಿ ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿದ್ದಾರೆ. ಕೆಎಸ್ ಆರ್ಟಿಸಿ ಸಿಬ್ಬಂದಿಗಳಿಗೂ ವೇತನ ಕೊಡುವುದಕ್ಕೂ ಯೋಗ್ಯತೆ ಇಲ್ಲದ ಸರಕಾರ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ 40% ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಆದರೆ ಅದೆ ಗುತ್ತಿಗೆದಾರರು ಇದೀಗ ಕಾಂಗ್ರೆಸ್ ನ ವಿರುದ್ದ 60% ಕಮಿಷನ್ ದಂಧೆಯಲ್ಲಿ ಸಂಪೂರ್ಣ ಮುಳುಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಸರಕಾರದಿಂದ ರಾಜ್ಯದಲ್ಲಿ ಕಾನೂನು ಸು ವ್ಯವಸ್ಥೆ ಸಂಪೂರ್ಣವಾಗಿ ಹದ ಗೆಟ್ಟಿದೆ. ಹಿಂದೂಗಳಿಗೆ ರಕ್ಷಣೆ ಇಲ್ಲ, ವೋ್ ಬ್ಯಾಂಕ್ ಗಾಗಿ ಮುಸ್ಲಿಂ ಓಲೈಕೆ ಮಾಡುತ್ತಿರುವುದರಿಂದ ರಾಜ್ಯದಲ್ಲಿ ತಾಲಿಬಾನ್ ಆಡಳಿತವನ್ನು ನಡೆಸುತ್ತಿದ್ದಾರೆ ಎಂದು ಯುವ ಘಟಕ ಅಧ್ಯಕ್ಷ ಬಾಳಗೌಡ ಪಾಟೀಲ ಪ್ರತಿಭಟನೆಯಲ್ಲಿ ಸರಕಾರ ವಿರುದ್ದ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಗುರುವಾರ l ನಗರದ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಭ್ರಷ್ಟ ಕಾಂಗ್ರೆಸ್ ಸರಕಾರ ಎಂದು ದಿಕ್ಕಾರ ಕೂಗಿ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಪ್ರತಿಭಟನೆ ರ‌್ಯಾಲಿ ಮೂಲಕ ತೆರಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಎನ್ನು ಭರವಸೆಗಳನ್ನು ಕೊಟ್ಟಿತು ಅವುಗಳನ್ನು ಎಲ್ಲವೂ ಸಂಪೂರ್ಣವಾಗಿ ರಾಜ್ಯದ ಜನತೆಗೆ ತಲುಪಿಸಬೇಕೆಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಸರಕಾರದ ವಿರುದ್ದ ಬೃಹತ್ ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ,ರೇವಡಿ, ರುದ್ರಗೌಡ ಪಾಟೀಲ, ಸುಭಾಷ ಎಸ್ ಬಾಗೆವಾಡಿ, ನಗರ ಅಧ್ಯಕ್ಷ ಪ್ರಮೋದ ಪಾಟೀಲ, ಯುವ ಘಟಕ ಅಧ್ಯಕ್ಷ ಬಾಳಗೌಡ ಪಾಟೀಲ, ರಾಮು ರಜಪೂತ, ರಾಘವೇದ ಕಾನ್ನಪನ್ನವರ್, ತಾಲೂಕು ಅಧ್ಯಕ್ಷ ರಾಜ್ ರೋಟಿ, ಶಿವು ಚವಾನ,
ಜೆ.ಡಿ.ಎಸ್ ಪಕ್ಷದ ಜಿಲ್ಲಾ ಮತ್ತು ತಾಲೂಕಾ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!