ಬೈಲಹೊಂಗಲ-05: ಬಜೆಟ್ ಅಧಿವೇಶನದಲ್ಲಿ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಪ್ರಸ್ಥಾಪಿಸಿರುವ ಹಳ್ಳಿಗಳಲ್ಲಿ ಅನಧಿಕೃತ ಮಧ್ಯ ಮಾರಟದ ವಿಚಾರ ಪಕ್ಷಾತೀತವಾಗಿ ಸ್ವಾಗತಾರ್ಹ. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದುರುವದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಅವರು, ರಾಜ್ಯದಲ್ಲಿ ಅತಿಯಾದ ಕೊಲೆ, ಸೂಲಿಗೆ ದರೋಡೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬಜೆಟ್ ಅಧಿವೇಶನದಲ್ಲಿ ಆಡಳಿತರೂಢ ಶಾಸಕರು ಹಳ್ಳಿ ಹಳ್ಳಿಗಳಲ್ಲಿ ಅನಧಿಕೃತವಾಗಿ ಮಧ್ಯ ಮಾರಟವಾಗುತ್ತಿರುವುದನ್ನು ಪ್ರಸ್ತಾಪಮಾಡಿರುವದು ಸಮಾಜದ ಕಾಳಜಿ ಎತ್ತಿತೊರುತ್ತದೆ. ಆದರೆ ಆಡಳಿತಾರೂಢ ಶಾಸಕರ ಗಮನಕ್ಕೆ ಈ ವಾಸ್ತವಿಕ ವಿಷಯ ಬಂದಿರುವದು ಶ್ಲಾಘನಿಯವಾದರು ಸರ್ಕಾರಿ ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿದ್ದು ಅಧಿಕಾರದ ಕಚ್ಚಾಟದಲ್ಲಿ ಸರ್ಕಾರ ಅಡಳಿತ ಸಂಪೂರ್ಣ ಕುಸಿದು ಹೊಗಿದೆ. ಈ ಕಚ್ಚಾಟ ಬಿಟ್ಟು ರಾಜ್ಯದ ಜನತೆಯ ಹಿತಕಾಪಾಡುವತ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
