09/12/2025
IMG-20250228-WA0000

ಮೂಡಲಗಿ-೨೮:ಮೂಡಲಗಿ ತಾಲ್ಲೂಕಿನ ‘ಅರಭಾವಿಯ ಆಂಜನೇಯ ಗ್ರಾಮೀಣ ಶಿಕ್ಷಣ ಸಂಸ್ಥೆಯ ಆಂಜನೇಯ ಅನುದಾನಿತ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 33ನೇ ವಾರ್ಷಿಕೋತ್ಸವ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಸಿವಯ್ಯ ಸ್ವಾಮೀಜಿ ಉದ್ಘಾಟಿಸಿದರು.

ಶಾಲಾ ಮಕ್ಕಳಿಗೆ ಕೇವಲ ಅಕ್ಷರ ಕಲಿಸಿದರೆ ಸಾಲದ ಆದರೊಂದಿಗೆ ಸಂಸ್ಕಾರವು ಅವಶ್ಯವಿದೆ ಎಂದು ಸಾಹಿತಿ ಹಾಗೂ ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ತಾಲ್ಲೂಕಿನ ಅರಭಾವಿಯ ಆಂಜನೇಯ ಗ್ರಾಮೀಣ ಶಿಕ್ಷಣ ಸಂಸ್ಥೆಯ ಅಂಜನೇಯ ಅನುದಾನಿತ ಪೂರ್ವ ಪಾಧಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 33 ನೇ ವಾರ್ಷಿಕೋತ್ಸವ ಹಾಗೂ ಎಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ ಅತಿಥಿಯಾಗಿ ಮಾತನಾಡಿದ ಅವರ ಮಕ್ಕಳಲ್ಲಿಯ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುಕಾರ್ಯವನ್ನು ಶಿಕ್ಷಣ ಮಾಡುತ್ತದೆ ಎಂದರು.

ಅರಭಾವಿ ಅಂಜನೇಯ ಪ್ರಾಥಮಿಕ ಶಾಲೆಯು ಗ್ರಾಮೀಣ ಭಾಗದ ಅನೇಕ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ಲಾಘನೀಯ ಮಾಡಿದೆ.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರ ಬಿಲಕುಂದಿ ಅವರು ಶಾಲೆಯ ಪ್ರಗತಿಯಲ್ಲಿ ಪರಿಶ್ರಮವು ಸಾಥ೯ಕವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ. ಮಲಬನ್ನವರ ಮಾತನಾಡಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಕಾ೯ರವು ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಚಿತ್ರ ನಟಿ ನಿರ್ಮಾಪಕಿ ಶಿವಲೀಲಾ ಮಾನೂರ, ಯೋಗ ಪಟು ನಂಜುಘೋಡಗೇರಿ, ಮಲ್ಲಕಂಭದಲ್ಲಿ ಸಾಧನೆ ಮಾಡಿರುವ ಶಿವಪ್ರಸಾದ ಕಡಾಡಿ, ಪ್ರವೀಣ ಮರನೂರ, ಮಿಥುನ ಪಾಟೀಲ, ತರಬೇತುದಾರ ಮೆಹಬೂಬ ಬುಡಿವಾಡ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಅನುಪಮಾ ಬೆಣ್ಣಿ , ಪ್ರೀಯಾಂಕ ಪಾತ್ರೋಟ, ಹರ್ಷಿತಾ ಮುತ್ತಲಗೇರಿ, ಭೀಮಶಿ ಸಂಪಗಾರ ಅವರನ್ನು ಸನ್ಮಾನಿಸಿದರು.

ಶಿವಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಂಕರ ಬಿಲಕುಂದಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಮಾದರ, ಉಪಾಧ್ಯಕ್ಷೆ ರಾಜೇಶ್ವರಿ ಗಂಗನ್ನವರ, ಮುಖ್ಯಾಧಿಕಾರಿ ವಿನಾಯಕ ಬಬಲೇಶ್ವರ, ಶಿಕ್ಷಕ ಗಣಪತಿ ಉಪ್ಪಾರ ಮತ್ತಿತರರು ಇದ್ದರು.
ಮುಖ್ಯ ಶಿಕ್ಷಕ ಎಂ ಜೆ ಜೈನ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

error: Content is protected !!