ಚಿಕ್ಕೋಡಿ-೨೪: ಚಿಕ್ಕೋಡಿ-ತಾಲ್ಲೂಕಿನ ಉಮರಾಣಿ ಗ್ರಾಮದ ರಾಮಲಿಂಗ ದೇವಸ್ಥಾನದ ಆವರಣದಲ್ಲಿ ಫೆ. 26ರಂದು ಬೆಳಿಗ್ಗೆ 10ಕ್ಕೆ ಶಿವರಾತ್ರಿ ನಿಮಿತ್ಯವಾಗಿ ಚಿಕ್ಕೋಡಿಯ ಉನ್ನತಿ ಸ್ವಯಂಸೇವಾ ಸಂಸ್ಥೆ ಹಾಗೂ ಸಾಹಿತ್ಯ ಗೂಡು ವೇದಿಕೆ ಸಹಯೋಗದಲ್ಲಿ “ಕಾವ್ಯ ಶಿವರಾತ್ರಿ” ಹೆಸರಿನ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಾಹಿತಿ ಎಸ್ ವೈ ಹಂಜಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಉಮರಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜೇರಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಸುಬ್ರಾವ ಎಂಟೆತ್ತಿನವರ, ರಾಮಲಿಂಗ ದೇವಸ್ಥಾನ ಸಮಿತಿ ಸದಸ್ಯ ಪರಗೌಡ ಪಾಟೀಲ, ಉನ್ನತಿ ಸ್ವಯಂಸೇವಾ ಸಂಸ್ಥೆಯ ಕಾರ್ಯದರ್ಶಿ ವಿಮಲಾ ಚಿನಕೇಕರ ಆಗಮಿಸುವರು.
ಕವಿಗೋಷ್ಠಿಯಲ್ಲಿ ನಿಪ್ಪಾಣಿಯ ಸರೋಜಿನಿ ಸಮಾಜೆ, ಚಿಕ್ಕೋಡಿಯ ಶಿವರಾಜ ಅರಳಿ, ಸುನೀಲ ಸಿಂಗೆ, ಲಲಿತಾ ಹಿರೇಮಠ, ಚಂದ್ರಶೇಖರ ಎಸ್ ಚಿನಕೇಕರ, ಬೋರಗಲ್ಲನ ಬಿ ಆರ್ ಕಾಮನಗೋಳ, ಯಕ್ಸಂಬಾದ ಶೃತಿ ಹೆಗ್ಗೆ, ರಾಯಬಾಗದ ಸಾಗರ ಝಂಡೇನ್ನವರ, ಅಂಕಲಿಯ ಪಿ ಎನ್ ತಳವಾರ, ಯಡ್ರಾವದ ಬೀರಪ್ಪ ಪೂಜಾರಿ, ಹುಕ್ಕೇರಿಯ ಜ್ಯೋತಿ ಮುರಾರಿ ಕಬ್ಬೂರ, ಮುಧೋಳದ ಶಿವಾನಂದ ಹೊಸಟ್ಟಿ, ಬೆಳಗಾವಿಯ ಸುಮಾ ಕುಲಕರ್ಣಿ, ವಿಜಯಪುರದ ಸಂತೋಷ ಪಾಟೀಲ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
