ಬೆಳಗಾವಿ-೨೨:ಮುಂಬರುವ ಕರ್ನಾಟಕ ಸರ್ಕಾರದ 2025-25ರ ಬಜೆಟ್‌ನಲ್ಲಿ ಛಲವಾದಿ ಸಮಾಜಕ್ಕೆ 500 ಕೋಟಿ ರೂಪಾಯಿ ಮೀಸಲು ನಿಧಿಯನ್ನು ಇಡಬೇಕು. ಸಮಾಜದ ಯುವಕರು ಸ್ವಯಂ ಉದ್ಯಮಶೀಲತೆಗಾಗಿ ಕ್ಯಾಪಿಟಲ್ ವೆಂಚರ್ ಫಂಡ್ (ಎಸ್‌ಸಿಪಿಟಿ)ಯಲ್ಲಿ ಮೀಸಲು ನಿಧಿಯನ್ನು ಇಡಬೇಕು ಎಂದು ಛಲವಾದಿ ಉದ್ದಿಮೆದಾರರ ಸಂಘದ ಅಧ್ಯಕ್ಷ ಡಾ. ಮಹಾನಿಂಗಪ್ಪ ಕೋಲ್ಕಾರ ಶುಕ್ರ ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಸಂಚಾರಿ ಸಮುದಾಯವಿದ್ದು, ಈ ಸಮುದಾಯದ ಬಡ ಮತ್ತು ಹಿಂದುಳಿದ ಯುವಕರಿಗೆ ಸ್ವಯಂ ಉದ್ಯೋಗ ಅತ್ಯಗತ್ಯವಾಗಿದೆ. ಮುಂಬರುವ ಬಜೆಟ್‌ನಲ್ಲಿ ಈ ಸ್ವಯಂ ಉದ್ಯಮಕ್ಕೆ ಮೀಸಲು ಇಡುವುದು ಅವಶ್ಯಕ. ಸಮಾಜದ ಯುವಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಹಣದ ಅವಶ್ಯಕತೆ ಇದೆ. ಪರಿಶಿಷ್ಟ ಜಾತಿಯಲ್ಲಿ ಕಡುಬಡವರಾಗಿರುವ ನಾಲ್ವಡಿ ಸಮುದಾಯದವರ ಅಭ್ಯುದಯಕ್ಕೂ ಬೇಡಿಕೆ ಇಡಲಾಗಿದ್ದು, ಯೋಧರಿಗೆ ಕೈಗಾರಿಕೆ ಸೃಷ್ಟಿಸಲು ಮೀಸಲು ಹಣ ನೀಡಬೇಕು.
ಈ ಸಂದರ್ಭದಲ್ಲಿ ದುರ್ಗೇಶ ಮೇತ್ರಿ, ಸಾಯಿನಾಥ ಕೋಲ್ಕಾರ, ಸವಿತಾ ಕಾಂಬಳೆ ಗಂಗಾರಾಮ್ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.
