ಬೆಳಗಾವಿ-೨೧:ನನಗೆ ಮರಾಠಿ ಬರಲ್ಲ ಕನ್ನಡ ಮಾತಾಡಿ ಎಂದಿದ್ದಕ್ಕೆ ಕೋಪಗೊಂಡು ಮರಾಠಿ ಪುಂಡರು ಬಸ್ ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನಗರದ ಹೊರವಲಯ ಸುಳೇಭಾವಿಯಲ್ಲಿ ನಡೆಯಿತು.
ಬೆಳಗಾವಿ ನಗರದಿಂದ ಸುಳೇಬಾವಿ ಕಡೆಗೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಟಿಕೆಟ್ ವಿಚಾರವಾಗಿ ಪ್ರಯಾಣಿಕರು ಹಾಗೂ ಕಂಡಕ್ಟರ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇಷ್ಟೇ ಕಾರಣಕ್ಕೆ ಕಂಡಕ್ಟರ್ ಮೇಲೆ ಎಗರಿದ ಗುಂಪು ಹಲ್ಲೆಗೆ ಮುಂದಾಗಿದೆ. ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಈ ಗುಂಪು ದಾಳಿ ಮಾಡಿದೆ ಎಂದು ಕಂಡಕ್ಟರ್ ಹೇಳಿದ್ದಾರೆ. ಇದನ್ನು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದರೆ ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಮಹಾತೇಶ್ ಕೂಲಿನವರ್ ಮತ್ತು ಬೆಳಗಾವಿ ಜಿಲ್ಲಾಉಸ್ತುವಾರಿ ರಾಜು ಸುಲಧಾಲ್ ಮತ್ತು ಜಿಲ್ಲಾ ಪ್ರದಾನ ಕಾರ್ಯದಶಿ ಅಣ್ಣಾಗೌಡ. ಶಿ. ಪಾಟೀಲ ಮತ್ತು ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶೈಲ ವಂಟಿಮುರಿ, ಬೆಳಗಾವಿ ನಗರ ಘಟಕ ಅಧ್ಯಕ್ಷರಾದ ಶಿವಾನಂದ್ ಅಂಕಲಗಿ, ಬೆಳಗಾವಿ ತಾಲೂಕಾ ಅಧ್ಯಕ್ಷರು ಶ್ರೀನಿವಾಸ್ ಸುಲಧಾಲ್, ಬೈಲಹೊಂಗಲ ತಾಲೂಕಾ ಅಧ್ಯಕ್ಷರಾದ ಬಾಬು ಪಾಟೀಲ, ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳು ಹಾಜರಿದ್ದರು.
