11/12/2025

“ಶಿವಾಜಿ ಮಹಾರಾಜರು ನಮಗೆಲ್ಲ ಆದರ್ಶ”

ಬೆಳಗಾವಿ-೨೦ : ಛತ್ರಪತಿ ಶಿವಾಜಿ ಮಹಾರಾಜರು ಬೆಳೆದ ರೀತಿಯನ್ನು ಮತ್ತು ಅವರ ಸಾಹಸ, ತಂತ್ರಗಾರಿಕೆ, ಚಾಣಾಕ್ಷತನ, ಕಾರ್ಯ ವೈಖರಿಗಳನ್ನು ಈಗಿನ ಯುವ ಜನತೆ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪತ್ರಕರ್ತ ದಿಲೀಪ್ ಕುರಂದವಾಡೆ ಕರೆ ನೀಡಿದರು.

IMG 20250220 WA0006 1 - IMG 20250220 WA0006 1

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಶಿವಾಜಿ ಉದ್ಯಾನವನದಲ್ಲಿ ಬುಧವಾರ  ಶಿವಾಜಿ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಶಿವಾಜಿ ಮಹಾರಾಜರು ಅಪ್ರತಿಮ ನಾಯಕ, ಅವರ ಸಾಹಸಮಯ ಬದುಕಿನ ಕಥೆಗಳನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಅವರು ಹೀಗೆ ಬೆಳೆಯಬೇಕಾದರೆ ಅವರ ತಾಯಿ ಜೀಜಾಮಾತಾ ಅವರ ಪಾತ್ರ ತುಂಬಾ ಮಹತ್ವದ್ದಾಗಿದೆ. ಶಿವಾಜಿಯು ಗರ್ಭದಲ್ಲಿ ಇದ್ದಾಗಲೇ ತರಬೇತಿ ನೀಡಲು ಅವರ ತಾಯಿ ಕುದುರೆ ಸವಾರಿ ಮಾಡಿದ್ದರು. ಇದರಿಂದಾಗಿ ಶಿವಾಜಿಗೆ ಕುದುರೆ ಸವಾರಿ ಕಲೆಯು ತಾಯಿಯ ಗರ್ಭದಲ್ಲಿ ಇದ್ದಾಗಲೇ ತಿಳಿದಿತ್ತು,
ಶಿವಾಜಿ ಮತ್ತು ಅವರ ಸ್ನೇಹಿತರು ಯುದ್ಧ ತರಬೇತಿಯ ಆಟಗಳನ್ನು ತಮ್ಮ ಬಾಲ್ಯದಲ್ಲಿ ಆಡಿ ಯುದ್ಧದ ಕುರಿತಾದ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು.

ಶಿವಾಜಿ ಮಹಾರಾಜರು ತಮ್ಮ ಪಟ್ಟಾಭಿಷೇಕ ನಡೆದಾಗ ಕೇವಲ 15 ಕೋಟೆಗಳನ್ನು ಹೊಂದಿದ್ದರು. ನಂತರ ತಮ್ಮ ಚಾಣಾಕ್ಷತನದಿಂದ ಹೋರಾಡಿ 300 ರಿಂದ 350 ಕೋಟೆಗಳನ್ನು ಹೊಂದಿದ್ದರು. ತಮ್ಮ ಯುದ್ಧದ ಸುಳಿವುಗಳನ್ನು ಯಾರಿಗೂ ತಿಳಿಯದ ಹಾಗೆ ಗೌಪ್ಯವಾಗಿ ಇಟ್ಟುಕೊಳ್ಳುತ್ತದ್ದರು‌. ಹೀಗೆ ತಮ್ಮ ಚಾಣಾಕ್ಷತನದಿಂದ ಅಪ್ಜಲಖಾನ್ ನ ವಧಿಸಿದರು.

ಶಿವಾಜಿ ಮಹಾರಾಜರ ಬಗ್ಗೆ ನಾವು ಇನ್ನು ತುಂಬಾ ಅಧ್ಯಯನ ಮಾಡಬೇಕಿದೆ. ಅವರ ಇನ್ನೂ ಅನೇಕ ರೀತಿಯ ಅಧ್ಯಯನಗಳು ನಡೆಯುತ್ತಿವೆ.
ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಧೈರ್ಯ-ಸಾಹಸದ ಕುರಿತು ತಿಳಿಸಬೇಕು ಎಂದು ಪತ್ರಕರ್ತ ದಿಲೀಪ್ ಕುರಂದವಾಡೆ ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜ ಸೇವಕರಾದ ಶಿವನಗೌಡಾ ಪಾಟೀಲ, ಹಮಹಾನಗರ ಪಾಲಿಕೆಯ ಸಹಾಯಕ ಅಭಿಯಂತರರಾದ ಕಿರಣ ಮಣ್ಣಿಕೇರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ:

ಬೆಳಗಾವಿಯಲ್ಲಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಅಂಗವಾಗಿ ಶಿವಾಜಿ ಉದ್ಯಾನದಲ್ಲಿ ಸಂಸದರಾದ ಜಗದೀಶ್ ಶೆಟ್ಟರ್ ಶಾಸಕರಾದ ಅಭಯ್ ಪಾಟೀಲ್ ಮಹಾಪೌರರು, ಉಪ ಮಹಾಪೌರರು ಹಾಗೂ ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ ಮತ್ತಿತರರು ಶಿವಾಜಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ, ಮಾಲಾರ್ಪಣೆ ಮಾಡಿದರು.

IMG 20250220 WA0023 - IMG 20250220 WA0023

IMG 20250220 WA0024 - IMG 20250220 WA0024

ಪಾಲಿಕೆ ಆಯುಕ್ತರಾದ ಶುಭ, ಕನ್ನಡ ಸಂಸ್ಕೃತ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತು ಸಮಾಜದ ಮುಖಂಡರು ಹಾಜರಿದ್ದರು.

error: Content is protected !!