11/12/2025
IMG-20250220-WA0001

• ಟೈಯರ್-2 ಮಾರುಕಟ್ಟೆಗಳಲ್ಲಿ ರೆಸ್ಟೋರೆಂಟ್ ಗಳು ಮತ್ತು ಗ್ರಾಹಕರಿಗೆ ಒ.ಎನ್.ಡಿ.ಸಿ.ಯೊಂದಿಗೆ ಹೊಸ ಅವಕಾಶಗಳ ಅನಾವರಣ
ಬೆಳಗಾವಿ-೨೦:ಭಾರತದ ಪ್ರಥಮ ಹಾಗೂ ಏಕೈಕ ಶೂನ್ಯ ಕಮೀಷನ್ ಫುಡ್ ಡೆಲಿವರಿ ಆ್ಯಪ್ ಆಗಿರುವ `ವಾಯು’, ತನ್ನ ಕಾರ್ಯವ್ಯಾಪ್ತಿಯನ್ನು ಟೈಯರ್-2 ನಗರಗಳಿಗೂ ವಿಸ್ತರಿಸುವುದಾಗಿ ಪ್ರಕಟಿಸಿದ್ದು ಬೆಳಗಾವಿಯ ಪೈ ರೆಸಾರ್ಟ್ ನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಕಟಿಸಲಾಯಿತು. ಈ ಹೊಸ ಕ್ರಮವು ಸ್ಥಳೀಯ ರೆಸ್ಟೋರೆಂಟ್ ಗಳಿಗೆ ವೆಚ್ಚ-ಉಳಿಸುವ, ತಂತ್ರಜ್ಞಾನ-ಪ್ರೇರಿತ ಪರಿಹಾರಗಳ ಮೂಲಕ ಹಣಕಾಸು ಹೊರೆ ಇಲ್ಲದೆ ಸುಸ್ಥಿರ ಪ್ರಗತಿಯನ್ನು ನೀಡುವ ಗುರಿ ಹೊಂದಿದೆ.
ಮುಂಬೈ, ಹೈದರಾಬಾದ್, ಪುಣೆ ಮತ್ತು ಬೆಂಗಳೂರಿನಲ್ಲಿ ಕಾರ್ಯಾಚರಣೆಗಳನ್ನು ಹೊಂದಿರುವ ವಾಯು ಈಗ ಸಣ್ಣ ನಗರಗಳಲ್ಲಿ ಡೆಲಿವರಿ ಸೇವೆಗಳಲ್ಲಿ ಅಂತರ ತುಂಬುತ್ತಿದ್ದು ಮೆಟ್ರೋ ನಗರಗಳಿಗೆ ಮೀಸಲಾಗಿದ್ದು ಸುಧಾರಿತ ತಂತ್ರಜ್ಞಾನ ಮತ್ತು ಪ್ಲಾಟ್ ಫಾರಂ ಪರಿಹಾರಗಳನ್ನು ತರುತ್ತಿದೆ. ಈ ಕಾರ್ಯಕ್ರಮವು 350+ ರೆಸ್ಟೋರೆಂಟ್ ಮಾಲೀಕರು, ಉದ್ಯಮ ನಾಯಕರು ಮತ್ತು ಪ್ರಮುಖ ಪಾಲುದಾರರು ಹೇಗೆ ವಾಯು ಪ್ಲಾಟ್ ಫಾರಂ ವೃದ್ಧಿಸುತ್ತಿರುವ ಮಾರುಕಟ್ಟೆಗಳಲ್ಲಿ ಫುಡ್ ಡೆಲಿವರಿಯಲ್ಲಿ ಪರಿವರ್ತಿಸಬಲ್ಲದು ಎನ್ನುವುದನ್ನು ಆವಿಷ್ಕರಿಸಿದರು.
`ವಾಯು’ವಿನ ಸಹ- ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮಂದರ್ ಲಾಂಡೆ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕರಾದ ಅನಿರುಧಾ ಕೋಟ್ಗಿರೆ, ಬೆಳಗಾವಿ ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ಅಜಯ್ ಪೈ ಹಾಗೂ ಬೆಳಗಾವಿ ನಗರದ `ವಾಯು’ ಫ್ರಾಂಚೈಸಿ ಮತ್ತು ನಮಸ್ತೆ ಡೆಲಿವರಿ ಮಾಲಿಕರಾದ ಪ್ರಶಾದ್ ವಾಂಟಮೌರಿ ಅಧಿಕೃತವಾಗಿ ಈ ವಿಷಯವನ್ನು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂದಾರ್ ಲಾಂಡೆ ಮತ್ತು ಅನಿರುಧಾ ಕೋಟ್ಗಿರೆ ಅವರು, 2ನೇ ಶ್ರೇಣಿಯ ನಗರಗಳಲ್ಲಿ ಆಹಾರ ವಿತರಣಾ ವ್ಯವಸ್ಥೆಯ ಬದಲಾವಣೆಗೆ `ವಾಯು’ವಿನ ಬದ್ಧತೆಯನ್ನು ಒತ್ತಿಹೇಳಿದರು.“ಸಣ್ಣ ಮಾರುಕಟ್ಟೆಗಳಲ್ಲಿ ವಿತರಣಾ ಸಹಭಾಗಿಗಳ ಕೊರತೆಯನ್ನು ಗಮನಿಸಿ ಸುಸಂಘಟಿತ ಹಾಗೂ ಪರಿಣಾಮಕಾರಿ ಕಾರ್ಯಜಾಲದ ಮೂಲಕ ಹೋಟೆಲ್ ಮತ್ತು ಇ- ಕಾಮರ್ಸ್ ವೇದಿಕೆಗಳೂ ಸೇರಿದಂತೆ ಸ್ಥಳೀಯ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ನೀಡಲು `ವಾಯು’ ಉದ್ದೇಶಿಸಿದೆ. ಕೃತಕ ಬುದ್ಧಿಮತ್ತೆ ಸಾಮರ್ಥ್ಯಗಳೊಂದಿಗೆ ನೌಕರ ವರ್ಗವನ್ನು ಮರುಕೌಶಲ್ಯಗೊಳಿಸುವುದು ಹಾಗೂ ಈ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವುದೂ ಈ ಉಪಕ್ರಮದ ಇತರ ಗುರಿಗಳಾಗಿವೆ” ಎಂದು ಅವರು ವಿವರಿಸಿದರು.
“ಆಹಾರ ವಿತರಣಾ ವೇದಿಕೆಗಳು ಹೋಟೆಲ್ ಉದ್ಯಮದ ಪ್ರಮುಖ ಭಾಗವೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿಯಾಗಿ ಶೇ.2 ರಷ್ಟು ಕಮೀಷನ್ ದರ ಏರಿಸಿರುವ ಸ್ವಿಗ್ಗಿ ಮತ್ತು ಝೊಮಾಟೋ ಗಳಿಂದಾಗಿ ಹೋಟೆಲ್ ಉದ್ಯಮಿಗಳ ಆರ್ಥಿಕ ಹೊರೆಯು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ನಮ್ಮ ನಗರಗಳಲ್ಲಿ `ವಾಯು’ವಿನ ಕಾರ್ಯಾರಂಭದಿಂದ , ನಮಗೆ ಅತ್ಯಗತ್ಯವಾಗಿದ್ದ ಪರ್ಯಾಯ ವ್ಯವಸ್ಥೆ ಲಭಿಸಿದಂತಾಗಿದೆ. ಒಎನ್ ಡಿಸಿ ಜೊತೆ ಶೂನ್ಯ ಕಮೀಷನ್ ಪಾಲುದಾರಿಕೆ ಮೂಲಕ, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಹಾಗೂ ಸಂಪಾದನೆಯ ಹೆಚ್ಚಿನ ಭಾಗವನ್ನು ಉಳಿಸಿಕೊಳ್ಳುವ ಅವಕಾಶವನ್ನು `ವಾಯು’ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ಅಜಯ್ ಪೈ, `ವಾಯು’ ಜೊತೆ ಕೈಜೋಡಿಸಿ, ತಮ್ಮ ಉದ್ಯಮವನ್ನು ತಮ್ಮ ಕೈಯಲ್ಲೇ ಹಿಡಿದಿಟ್ಟುಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುವಂತೆ ಹೊಟೆಲ್ ಉದ್ಯಮಿಗಳಿಗೆ ಕರೆ ನೀಡಿದರು.
ವೆಚ್ಚ ನಿರ್ವಹಣೆ ಮತ್ತು ತಂತ್ರಜ್ಞಾನ ಆಧಾರಿತ ಮಾರ್ಗೋಪಾಯಗಳೊಂದಿಗೆ ಸ್ಥಳೀಯ ರೆಸ್ಟೋರೆಂಟ್ ಗಳನ್ನು ಸದೃಢಗೊಳಿಸುವುದರ ಜೊತೆಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ನಿರಂತರ ಬೆಳವಣಿಗೆಯನ್ನು ಖಾತ್ರಿಗೊಳಿಸುವ ಉದ್ದೇಶದಿಂದ ಈ ಹೊಸ ಉಪಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳ ಹೆಚ್ಚಿನ ನಗರಗಳಲ್ಲಿ ಕಾರ್ಯವ್ಯಾಪ್ತಿ ವಿಸ್ತರಿಸಲಿರುವ ವಾಯುವಿನ ಈ ಉಪಕ್ರಮವು ಒಂದು ಪ್ರಮುಖ ಮೈಲಿಗಲ್ಲು. ಅಧಿಕ ಹೋಟೆಲ್ ಗಳನ್ನು ತನ್ನ ಕಾರ್ಯ ವ್ಯಾಪ್ತಿಗೆ ಸೇರಿಸಿ, ಅತ್ಯುತ್ತಮ ಮತ್ತು ವಿಶ್ವಾಸಾರ್ಹ ಸೇವೆಗಳ ಮೂಲಕ ಹೋಟೆಲ್ ಹಾಗೂ ಗ್ರಾಹಕರನ್ನು ಸಂತೃಪ್ತಗೊಳಿಸುವುದು `ವಾಯು’ವಿನ ಮುಖ್ಯ ಧ್ಯೇಯವಾಗಿದೆ.ಇದರ 0% ಕಮೀಷನ್ ಕ್ರಮವು, ಸ್ಥಳೀಯ ಹೋಟೆಲ್ ಗಳ ಲಾಭಮಟ್ಟವನ್ನು ಉತ್ತಮಗೊಳಿಸುವುದರ ಜೊತೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರಗಳನ್ನು ಗ್ರಾಹಕರಿಗೆ ಪೂರೈಸಲು ನೆರವಾಗಲಿದೆ.

error: Content is protected !!