ಬೆಳಗಾವಿ-17 : ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯವು ’ಸಾರ್ವಜನಿಕ ಗ್ರಂಥಾಲಯ ಬೆಳಗಾವಿ ಪತ್ರಕರ್ತ ಪ್ರಶಸ್ತಿ _2023’ ಅನ್ನು ಪ್ರಕಟಿಸಿದೆ. ಸಾರ್ವಜನಿಕ ಗ್ರಂಥಾಲಯವು ಪತ್ರಿಕಾ ಪ್ರಕಟಣೆಯ ಮೂಲಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಕನ್ನಡ ವಿಭಾಗದಲ್ಲಿ ಬೆಳಗಾವಿಯ ಹಳ್ಳಿಯ ಸಂದೇಶ ಪತ್ರಿಕೆಯ ಸಂಪಾದಕರಾದ ಕುಂತಿನಾಥ ಕಲಮನಿ ಅವರಿಗೆ ಪ್ರಶಸ್ತಿ ಲಭಿಸಿದೆ. ಅದರಂತೆ ಸುನೀಲ್ ಮಾರುತಿ ಕೊಂಡೂಸ್ಕರ್, ದೈನಿಕ್ ಸಕಾಳ, ಕೊಲ್ಲಾಪುರ ಮರಾಠಿ ವಿಭಾಗಕ್ಕೆ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಅಲ್ಲದೆ, ಪ್ರೊ. ಎಸ್. ಆರ್. ಜೋಗ ಮಹಿಳಾ ಪತ್ರಕರ್ತೆ ಮರಾಠಿ ವಿಭಾಗದಲ್ಲಿ ಕೊಲ್ಹಾಪುರದ ಲೋಕಮತ್ ಮೀಡಿಯಾ ನೆಟ್‌ವರ್ಕ್ ವರದಿಗಾರ ದುರ್ವಾ ಗಜಾನನ ದಳವಿ ಮತ್ತು ಕನ್ನಡ ವಿಭಾಗದಲ್ಲಿ ಲೋಕದರ್ಶನ ದಿನಪತ್ರಿಕೆ ಬೆಳಗಾವಿಯ ವರದಿಗಾರ್ತಿ ವಿದ್ಯಾ ವಿಲಾಸ ಪಾಟೀಲ ಅವರಿಗೆ 2023 ರ ಮಹಿಳಾ ಪತ್ರಕರ್ತ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಈ ಪ್ರಶಸ್ತಿ ವಿಜೇತರಿಗೆ ನಗದು, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಈ ಪತ್ರಕರ್ತ ಪ್ರಶಸ್ತಿಗಳನ್ನು ದಿನಾಂಕ 18-1-24 ಗುರುವಾರದಂದು ರಂದು ಸಾಯಂಕಾಲ 5 ಗಂಟೆಗೆ ಮರಾಠಾ ಮಂದಿರ ಸಭಾಂಗಣದಲ್ಲಿ ನಡೆಯಲಿರುವ ಬ್ಯಾರಿಸ್ಟರ್ ನಾಥ್ ಪೈ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.