14/12/2025
IMG-20250213-WA0005

ಅಥಣಿ-೧೩: ಅಥಣಿಯ ಸರ್ಕಾರಿ ಪದವಿ ಕಾಲೇಜಿನ ಆಟದ ಮೈದಾನದ ಅಭಿವೃದ್ಧಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಭೂಮಿ‌ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

2023-24ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ಹಾಗೂ ವಿಧಾನಸಭಾ ಸದಸ್ಯರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 20 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ‌.

ಈ ವೇಳೆ ಯುವ ನಾಯಕರಾದ ಚಿದಾನಂದ ಸವದಿ, ಶಾಲಾ ಸಿಬ್ಬಂದಿ, ಸ್ಥಳೀಯ ನಿವಾಸಿಗಳು, ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹೊರಾಂಗಣ ಅಭಿವೃದ್ಧಿ ಕಾಮಗಾರಿ:

ಅಥಣಿ ತಾಲೂಕಿನ ಅಡಾಳಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಹೊರಾಂಗಣ ಅಭಿವೃದ್ಧಿ ಕಾಮಗಾರಿಗೆ ಗುರುವಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೂಮಿ‌ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

2023-24ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ಹಾಗೂ ವಿಧಾನಸಭಾ ಸದಸ್ಯರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 15 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ‌.

ಈ ವೇಳೆ ಯುವ ನಾಯಕರಾದ ಚಿದಾನಂದ ಸವದಿ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷರಾದ ಶಿವು ಗುಡ್ಡಾಪುರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಸವಂತ ಗುಡ್ಡಾಪುರ್, ಸದಸ್ಯರಾದ ಈರಗೌಡ ಪಾಟೀಲ, ಸುನಿಲ್ ಕೆಂಚಣ್ಣವರ, ನಿಂಗಯ್ಯ ಮಠಪತಿ, ಪರಸಪ್ಪ ಅಥಣಿ, ಸಿದ್ದಪ್ಪ ಕೆಂಚಣ್ಣವರ, ಡಾ.ಎಸ್.ಎ.ಖೋತ್, ಕಲ್ಮೇಶ ಪೂಜಾರಿ ಸೇರಿದಂತೆ ಅನೇಕರು ಹಾಜರಿದ್ದರು.

error: Content is protected !!