12/12/2025
IMG-20250204-WA0005

ಬೈಲಹೊಂಗಲ-04: ತಾಲೂಕಿನ ಮಾಸ್ತಮರ್ಡಿ ಗ್ರಾಮದಲ್ಲಿ ಲಕ್ಷ್ಮಿ ದೇವಿ ಮೂರ್ತಿಗೆ 7 ಕೆಜಿ ಬೆಳ್ಳಿ ಕವಚ ನೀಡಿದ ಮಾಜಿ ಸೈನಿಕ ಮಲ್ಲಿಕಾರ್ಜುನ್ ಮುತ್ತೆನ್ನವರ್ ಹಾಗೂ ಶಕುಂತಲಾ ಮಲ್ಲಿಕಾರ್ಜುನ್ ಮುತ್ತೇನ್ನವರ್ ದಂಪತಿಗಳು ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾದ ಮುತ್ತೆನ್ನವರ್ ಕುಟುಂಬ.

ಮಸ್ತಮರಡಿ ಗ್ರಾಮದಲ್ಲಿ ತಮ್ಮದೇ ಆದಂತಹ ಸಮಾಜ ಸೇವೆ ಹಾಗೂ ಜನರ ಸಮಸ್ಯೆಗಳಲ್ಲಿ ಪಾಲ್ಗೊಂಡು ತಮ್ಮ ಕೈಲಾದ ಸಹಾಯ ಮಾಡುತ್ತಾ ಗ್ರಾಮದ ಜನರ ಪ್ರೀತಿಯನ್ನು ಗಳಸಿದ್ದಾರೆ ಅದಲ್ಲದೆ ಗ್ರಾಮದ ಮಹಾಲಕ್ಷ್ಮಿ ದೇವಿಯು ಮೇಲೆ ಇರುವ ಭಕ್ತಿಗೆ 7ಕೆಜಿ ಯ ಬೆಳ್ಳಿಯ ಕವಚ ನೀಡಿದ್ದಾರೆ . ಈ ಅದ್ದೂರಿ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಹೆಣ್ಣುಮಕ್ಕಳು ಕುಂಭಮೇಳದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿದರು ಈ ಸಂದರ್ಬದಲ್ಲಿ ಗ್ರಾಮದ ಎಲ್ಲಾ ಹಿರಿಯರು ಮುಖಂಡರು ಯುವಕರು ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು .

error: Content is protected !!