11/12/2025
IMG-20250201-WA0007

ಬೆಳಗಾವಿ-೦೧- ಸಾಹಿತಿ ಡಾ. ಸುನೀಲ ಪರೀಟ ಅವರ ಬಹುದೊಡ್ಡ ಪ್ರಶ್ನೆ ಮತ್ತು ನಮ್ಮ ರಕ್ಷಕ ಕೃತಿಗಳ ಬಿಡುಗಡೆ ಸಮಾರಂಭ ಬೆಳಗಾವಿ ಶಿವಾ ಆಪ್ ಸೆಟ್ ಪ್ರಿಂಟರ್ಸ ಪಬ್ಲಿಶರ್ಸ್ ವತಿಯಿಂದ
ದಿ 2 ರಂದು ಬೆಳಿಗ್ಗೆ ೧೦ ಘಂಟೆಗೆ ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಹಿರಿಯ ಸಾಹಿತಿ ಸ.ರಾ.ಸೂಳಕೂಡೆ ಅಧ್ಯಕ್ಷತೆ ವಹಿಸುವರು.
ಕಸಾಪ ಬೆಳಗಾವಿ ಜಿಲ್ಲಾದ್ಯಕ್ಷೆ
ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಡಾ. ಬಾಳಾಸಾಹೇಬ ಲೋಕಾಪುರ
ಕೃತಿ ಬಿಡುಗಡೆಗೊಳಿಸುವರು‌.
‘ನಮ್ಮ ರಕ್ಷಕ’ಕೃತಿಯನ್ನು ಡಾ. ಎಫ್. ಡಿ. ಗಡ್ಡಿಗೌಡರ – ‘ಬಹುದೊಡ್ಡ ಪ್ರಶ್ನೆ’ ಕೃತಿಯನ್ನು ನಾಗೇಶ ನಾಯಕ ಪರಿಚಯಿಸುವರು‌.
ಮುಖ್ಯ ಅತಿಥಿಗಳಾಗಿ ಪ್ರೊ. ಎಸ್. ಎಂ. ಗಂಗಾಧರಯ್ಯ ,ಡಾ. ಶಿವು ಎಂ. ನಂದಗಾಂವ , ಶ್ರೀಮತಿ ಪಾರ್ವತಿ ಗುರುದೇವ ಅಂಬಲಿ, ಮೋಹನ್ ಬಸನಗೌಡ ಪಾಟೀಲ, ಎಂ.ವೈ. ಮೆಣಸಿನಕಾಯಿ, ಡಾ.ಸುನೀಲ ಪರೀಟ ಉಪಸ್ಥಿತರಿರುವರು.

error: Content is protected !!