ಬೈಲಹೊಂಗಲ-22: ಸಮೀಪದ ಹೊಸೂರ ಗ್ರಾಮದ ಯುವ ಪ್ರತಿಭೆ ಪ್ರಮೋದ ವಕ್ಕುಂದ ಯೋಗಾದಲ್ಲಿ ರಾಣಿ ಚನ್ನಮ್ಮ ವಿವಿಯಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಒಡಿಸ್ಸದಲ್ಲಿ ಡಿ25ರಿಂದ 27 ರವರೆಗೆ ನಡೆಯುವ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುತ್ತಿರುವ ಸಂದರ್ಭದಲ್ಲಿ ಶುಕ್ರವಾರ ಗ್ರಾಮದ ಜನತೆ ಸತ್ಕರಿಸಿ ಬಿಳ್ಕೊಟ್ಟರು.
ನ್ಯಾಯವಾದಿ ಎಫ್.ಎಸ್. ಸಿದ್ದನಗೌಡರ ಸತ್ಕಾರ ನೆರವೆರಿಸಿ ಮಾತನಾಡಿ, ಇಂದಿನ ಯಾಂತ್ರಿಕಯುಗದಲ್ಲಿ ಜನತೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸುತ್ತಿದ್ದಾರೆ.
ಭಾರತದ ಯೋಗವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಅಳವಡಿಸಿಕೊಳ್ಳುತ್ತಿರುವಾಗ ನಮ್ಮ ದೇಶದ ಕೆಲ ಯುವಕರು ದುಶ್ಚಟಕ್ಕೆ ಬಲಿಯಾಗಿತ್ತಿರುವದು ವಿಪರ್ಯಾಸ. ಗ್ರಾಮೀಣ ಪ್ರತಿಭೆ ಪ್ರಮೋದ ವಕ್ಕುಂದ ಯೋಗದಲ್ಲಿ ವಿವಿಗಳ ಮಟ್ಟದಲ್ಲಿ ರಾಷ್ಟ್ರೀಯ ಯೊಗಪಟುವಾಗಿ ಹೊರಹೊಮ್ಮಿರುವದು ಗ್ರಾಮದ ಗೌರವ ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ
ಅವರಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಸೊರಗುತ್ತಿರುವಾಗ ಇಂತಹ ಪ್ರತಿಭೆಗಳು ಹೊರ ಹೊಮ್ಮುತ್ತಿರುವದು ಶ್ಲಾಘನೀಯ. ಇದೊಂದು ಗ್ರಾಮೀಣ ಯುವಕರಿಗೆ ಸ್ಪೂರ್ತಿದಾಯಕವಾಗಿದ್ದು, ಸಾಧನೆ ಮಾಡುಲು ಹೊರಟ ಗ್ರಾಮೀಣ ಯುವ ಸಮುದಾಯಕ್ಕೆ ನಿದರ್ಶನವಾಗಿದ್ದಾರೆ ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ಹೊರಹೊಮ್ಮುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕುಟುಂಬ ಹಾಗೂ ಸಮಾಜದಿಂದ ರಾಷ್ಟ್ರಮಟ್ಟದಲ್ಲಿ ವಿಜಯಶಾಲಿಗಳಾಗಲಿ ಎಂದು ಶುಭಹಾರೈಸೋಣ ಎಂದರು.
ಗ್ರಾಮದ ಹಿರಿಯರಾದ ಬಸವಾಣೆಪ್ಪ ಸಂಗೋಳ್ಳಿ, ನಾಗರಾಜ ಬುಡಶೆಟ್ಟಿ, ಮಲ್ಲಿಕಾರ್ಜುನ ವಕ್ಕುಂದ, ಗೌಡಪ್ಪ ಹೊಸಮನಿ,
ಪ್ರಮೋದ ವಕ್ಕುಂದ ಅವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಬಸವಾಣೆಪ್ಪ ಸಂಗೋಳ್ಳಿ, ಮುನೀರ ಶೇಖ, ಮೋಹನ ವಕ್ಕುಂದ, ಉಮೇಶ ಸಂಗೊಳ್ಳಿ, ರಮೇಶ ವಕ್ಕುಂದ, ಮಂಜುನಾಥ ಬುಡಶೆಟ್ಟಿ, ಮಂಜುನಾಥ ಹೊಸಮನಿ, ಕಿರಣ ಏಣಗಿ, ಸುರೇಶ ವಕ್ಕುಂದ, ಮಂಜುನಾಥ ಸಂಗೋಳ್ಳಿ, ಪ್ರಮೋದ ಹುರಕಡ್ಲಿ, ದರ್ಶನ ಬೋಳೆತ್ತಿನ, ಭೀಮ ಹುಂಬಿ, ಸಂತೋಷ ಏಣಗಿ, ಈರಪ್ಪ ಚಿಕ್ಕೊಪ್ಪ ಮುಂತಾದವರು ಉಪಸ್ಥಿತರಿದ್ದರು.
ಸೋಮಪ್ಪ ವಕ್ಕುಂದ ಸ್ವಾಗತಿಸಿದರು. ಸಂತೋಷ ಕಲಘಟಗಿ ನಿರೂಪಿಸಿ ವಂದಿಸಿದರು.