11/12/2025
IMG-20250123-WA0006

ಬೆಳಗಾವಿ-೨೩:ದಿನಾಂಕ: 22/01/ 2025 ರಂದು ಯಾದ್ವಡ ದಾಲ್ಮಿಯಾ (ಭಾರತ) ಸಿಮೆಂಟ್ ಕಾರ್ಖಾನೆಯ ದಾಲ್ಮಿಯಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ದಾಲ್ಮಿಯಾ ದೀಕ್ಷಾ ಕೌಶಲ್ಯ ಕೇಂದ್ರ ಬೆಳಗಾವಿಯಲ್ಲಿ ಸಹಾಯಕ ಸೌಂದರ್ಯ ಚಿಕಿತ್ಸಕ, ಗ್ರಾಹಕ ಕಾರ್ಯನಿರ್ವಾಹಕ ಮತ್ತು ಸಹಾಯಕ ಎಲೆಕ್ಟ್ರಿಷಿಯನ್ ತರಬೇತಿಗಳನ್ನು ಕರೂರ್ ವೈಶ್ಯ ಬ್ಯಾಂಕ್ ನೆರವಿನೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಯಶಸ್ವಿಯಾಗಿ ಪೂರ್ಣಗೊಳಿಸಿದ 100 ಯುವಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಸತೀಶ್ ಖಾನ್ ಗೌಡರ್ ವ್ಯವಸ್ಥಾಪಕರು ಕರೂರ್ ವೈಶ್ಯ ಬ್ಯಾಂಕ್ ಬೆಳಗಾವಿ, ಶ್ರೀ ಅಭಿನವ್ ಯಾದವ್, ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು, ನಬಾರ್ಡ್, ಶ್ರೀಮತಿ ನಾಗರತ್ನ ಸ ರಾಮನಗೌಡ, ಸಂಸ್ಥಾಪಕರು ಆಶ್ರಯ ಸಂಸ್ಥೆ, ಬೆಳಗಾವಿ ಹಾಗೂ ಶ್ರೀ ಅಶ್ವಿನ್ ಕುಮಾರ್. ಡಿ. ಸಿ.ಎಸ್.ಆರ್ ಜನರಲ್ ಮ್ಯಾನೇಜರ್, ದಾಲ್ಮಿಯಾ ಸಿಮೆಂಟ್ ಭಾರತ್ ಲಿಮಿಟೆಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ದಾಲ್ಮಿಯಾ ದೀಕ್ಷಾ ಕೌಶಲ್ಯ ಕೇಂದ್ರದ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು ಶಿಬಿರಾರ್ಥಿಗಳೊಂದಿಗೆ. ದಾಲ್ಮಿಯಾ ಸಿಮೆಂಟ್ ನ ಬೆಳಗಾವಿ ಸಿ. ಎಸ್. ಆರ್. ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!