11/12/2025
IMG-20250120-WA0000

ಗೋಕಾಕ-೨೦: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ರೈಲ್ವೆ ಕೂಲಿ ಕಾರ್ಮಿಕರನ್ನು ಗ್ಯಾಂಗ್‌ಮ್ಯಾನ್ ಎಂದು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಶ್ರೀ ಸಿದ್ಧಾರೂಡ ಸ್ವಾಮೀಜಿ ರೇಲ್ವೆ ಕೂಲಿ ಪೋರ್ಟರ್ಸ ಸಂಘಟನೆಯಿಂದ ಶನಿವಾರ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಅ.17 ರಂದು ಲಕ್ಕೋದಲ್ಲಿ ನಡೆದ ಹಮಾಲರ ರಾಷ್ಟ್ರೀಯ ಸಭೆಯಲ್ಲಿ, ಪೋರ್ಟ್‌ರ್ ಪ್ರತಿನಿಧಿಗಳು ನಿರ್ಧಾರವನ್ನು ತೆಗೆದುಕೊಳ್ಳಾಗಿದೆ. ಈ ಸಭೆಯಲ್ಲಿ ಹಾಜರಿದ್ದ ಸಾವಿರಾರು ಹಮಾಲರು, ಸಚಿವಾಲಯಕ್ಕೆ ಹಾಗೂ ದೇಶದ ಪ್ರಧಾನಿಗೆ ಸೂಕ್ತ ಮನವಿ ಸಲ್ಲಿಸಲು ವಿನಂತಿಸಿದರು.

ಖಾಸಗೀಕರಣದ ಪರಿಣಾಮವಾಗಿ ಹಮಾಲರು ಉದ್ಯೋಗ ಮತ್ತು ಆದಾಯದಲ್ಲಿ ಬಿಟ್ಟನ್ನು ಎದುರಿಸುತ್ತಿದ್ದಾರೆ. ವಂದೇ ಭಾರತ್, ತೇಜಸ್ ರೈಲುಗಳ ಆರಂಭ, ಎಸ್‌ಐ ಕೋಚ್‌ಗಳ ಎಕ್ವಟ್, ಎಸ್ಕಲೇಟರ್‌ಗಳ ಅಳವಡಿಕೆ ಮುಂತಾದ ಬದಲಾವಣೆಗಳು ಹಮಾಲರ ಮೇಲೆ ಪ್ರಭಾವ ಬೀರುತ್ತಿವೆ. 2008 ರಲ್ಲಿ ಲಾಲು ಪ್ರಸಾದ್ ಯಾದವ್ ಅವರ ಕಾಲದಲ್ಲಿ ಹಮಾಲರನ್ನು ಗ್ಯಾಂಗ್‌ಮ್ಯಾನ್‌ಗಳಾಗಿ ನೇಮಕ ಮಾಡಿದಂತೆ ಈಗ ಮರುನೇಮಕಾತಿ ಮಾಡಬೇಕೆಂದು ಸಂಸದರಿಗೆ ಮನವಿ ಮಾಡಿದರು.

ಹತ್ತಾರು ವರ್ಷಗಳಿಂದ ರೈಲ್ವೆ ಕೂಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದೆವೆ. ಸರ್ಕಾರಗಳು ನಮಗೆ ಯಾವುದೇ ಸಹಾಯ-ಸಹಕಾರ ನೀಡಿಲ್ಲ, ಕುಟುಂಬಗಳನ್ನು ನಿಗಿಸುವುದು ಕಷ್ಟಕರವಾಗಿದೆ. ಕೇಂದ್ರ ಸರ್ಕಾರವೂ ಬಜೆಟ್‌ನಲ್ಲಿ ನಮಗೂ ಕೂಡ ಒಂದಿಷ್ಟು ಸೌಲಭ್ಯ ಕಲ್ಪಿಸಬೇಕು. ಮಕ್ಕಳು ಶಿಕ್ಷಣಕ್ಕೆ ತೀವ್ರ ತೊಂದರೆ ಅನುಭವಿಸುವ ಕಾಲ ಎದುರಾಗುತ್ತಿದೆ. ನಿತ್ಯವೂ ಕಾಲಮಾನದ ದರಗಳು ಏರಿಕೆಯತ್ತ ಸಾಗಿವೆ. ಚಳಿ-ಮಳೆ ಬೆಸಿಗೆ ಎನ್ನದೇ ಹಗಲಿರುಳು ರೈಲ್ವೆಯಲ್ಲಿ ಸೇವೆ ಮಾಡುತ್ತಿದ್ದೆವೆ. ಕೇಂದ್ರ ರೈಲ್ವೆ ಸಚಿವರು ಇದನ್ನು ಗಂಭೀರವಾಗಿದೆ ಪರಿಗಣಿಸಿ ನಮ್ಮ ಬೇಡಿಕೆ ಈಡೇಸಬೇಕು ಎಂದು ಮನವಿ ಮಾಡಿಕೊಂಡರು.

 

ಶೀಘ್ರವೇ ರೈಲ್ವೆ ಕೂಲಿ ಕಾರ್ಮಿಕರನ್ನು ಗ್ಯಾಂಗಮಾನ್‌ ಎಂದು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶಿಸಬೇಕು. ಫೆ. 1 ರ ಬಜೆಟ್‌ನಲ್ಲಿ ಈ ಪ್ರಸ್ತಾಪವನ್ನು ಮುಂದುರಿಸಬೇಕು ಎಂಬುದು ಹಮಾಲರ ವಿನಂತಿಕೊಂಡರು.

ಈ ಸಂದರ್ಭದಲ್ಲಿ ಅಧ್ಯಕ್ಷ ಅಲಿ ದವಲಸಾಬ್‌ ನದಾಪ, ಉಪಾಧ್ಯಕ್ಷ ಚಂದ್ರು ಛಲವಾದಿ, ಜಾಪರ್‌ ಖಾನ್‌ ಜಮಖಾನವಾಲೆ, ಆನಂದ ರುದ್ರಪ್ಪನ್ನವರ, ಅಬ್ದುಲ್‌ ರಜಾಕ್‌ ಬಳ್ಳಾರಿ, ಮಂಜು ಸಿದ್ಧಾಪುರ, ಗೌಸ್‌ ಮೊದಿನ ಅತಾರೆ, ಇಮಾಮ್‌ ಸಾಬ್‌ ಮನಿಯಾರ್‌, ಶರೀಪ್‌ ನರನಂಗಿವಾಲೆ, ಗೌಸ್‌ ಮೊದಿನ್‌ ಎಂ., ಸುರೇಶ ಹಂಸಿ, ಸೈಕ್‌ ಅಮೀರ್‌ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!