14/12/2025
IMG-20250116-WA0008

 

IMG 20250116 WA0000 - IMG 20250116 WA0000ಮೂಡಲಗಿ-೧೬: ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಘಟಪ್ರಭಾ ರೈಲ್ವೆ ಸ್ಟೇಶನ್‌ದ ಸಲಹಾ ಸಮಿತಿಗೆ ಅರಭಾವಿ ಮತಕ್ಷೇತ್ರದ ಐವರನ್ನು ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶಿಫಾರಸ್ಸು ಮೇರೆಗೆ ಸದಸ್ಯರನ್ನಾಗಿ ನೇಮಕ ಮಾಡಿದ ಬಗ್ಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಿ. ಪರಂದಮಾನಆದೇಶ ಹೊರಡಿಸಿದ್ದಾರೆ.

ಅರಭಾವಿ ಬಿಜೆಪಿ ಮಂಡಲದ ಕಾರ್ಯಕರ್ತರಾದ ಕೇದಾರಿ ಭಸ್ಮೆ (ಮೂಡಲಗಿ), ಮುತ್ತೆಪ್ಪ ಮನ್ನಾಪೂರ(ತಪಸಿ), ಭೀಮಶಿ ಮಾಳೇದವರ(ಸಂಗನಕೆರಿ), ಪ್ರಮೋದ ನುಗ್ಗಾನಟ್ಟಿ( ಕಲ್ಲೋಳಿ), ನಾಗೇಶ ಕುದರಿ(ತಳಕಟ್ನಾಳ) ಇವರು ಇದೇ ಜ.೧ರಿಂದ ಎರಡು ವರ್ಷಗಳ ಅವಧಿಗೆ ನೇಮಕವಾಗಿರುವರು.

ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರುಗಳ ಶಿಫಾರಸು ಮೇರೆಗೆ ಈ ನೇಮಕ ಮಾಡಿದರು.

error: Content is protected !!