ಕೌಜಲಗಿ-೧೫ : ರಾಯಬಾಗ ತಾಲೂಕು ಇಟ್ನಾಳ ಗ್ರಾಮದಲ್ಲಿ ಜರುಗುತ್ತಿರುವ ಮೌನೇಶ್ವರ ಜಾತ್ರೆಯ ನಿಮಿತ್ಯ ಶಿರಸಂಗಿಯಿಂದ ಆಗಮಿಸಿದ ಕಾಳಮ್ಮನ ಪಲ್ಲಕ್ಕಿಯನ್ನು ಕೌಜಲಗಿ ಪಟ್ಟಣದಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಭಾನುವಾರ ಪಟ್ಟಣಕೆ ಆಗಮಿಸಿದ ಕಾಳಮ್ಮನ ಪಲ್ಲಕ್ಕಿಯನ್ನು ಭಕ್ತಿ ಗೌರವದಿಂದ ವಿಶ್ವಕರ್ಮ ಸಮಾಜದ ಮುಖಂಡರು, ಕಾಳಮ್ಮನ ಭಕ್ತರು, ಹಿರಿಯರು ಮಹಿಳೆಯರು, ಮಕ್ಕಳು ಕಳ್ಳಿಗುದ್ದಿ ಸರ್ಕಲ್ ಹತ್ತಿರ ಮುತ್ತೈದೆಯರು ಆರತಿಯನ್ನು ಎತ್ತಿ ಬೆಳಗುವುದರ ಮೂಲಕ ಬರಮಾಡಿಕೊಳ್ಳಲಾಯಿತು.
ಪೂಜೆ ಸಲ್ಲಿಸಿ ಮಾತನಾಡಿದ ಸಾಹಿತಿ ಡಾ. ರಾಜು ಕಂಬಾರ ಮಾತನಾಡಿ, ಕಾಳಮ್ಮ ಪಂಚಕಸುಬಿನ ಕುಶಲಕರ್ಮಿಗಳ ಆರಾಧ್ಯ ದೈವವಾಗಿದ್ದು, ಅವಳು ಧಾರ್ಮಿಕ ದೇವತೆಯಷ್ಟೇ ಅಲ್ಲ, ಕುಶಲಕರ್ಮಿಗಳ ವೃತ್ತಿ ದೇವತೆಯು ಆಗಿದ್ದಾಳೆ. ಅವಳ ಆರಾಧನೆ ಕುಶಲಕಲೆಗಳ ಆರಾಧನೆಯಾಗಿದ್ದು, ಕುಶಲಕರ್ಮಿಗಳು ಶ್ರದ್ಧೆ- ನಿಷ್ಠೆಯಿಂದ ಕಾಯಕವನ್ನು ನಿರ್ವಹಿಸಿದರೆ ಕಾಳಮ್ಮ ನಮ್ಮೆಲ್ಲರ ಕಷ್ಟಕಾರ್ಪಣ್ಯಗಳನ್ನು ಹೋಗಲಾಡಿಸಿ, ಮನುಕುಲವನ್ನು ಉದ್ದರಿಸುತ್ತಾಳೆ ಎಂದು ಹೇಳಿದರು.
ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ವಾದ್ಯ ಮೇಳಗಳೊಂದಿಗೆ ಬಸವೇಶ್ವರ ಪೇಟೆ ಮೂಲಕ ದ್ಯಾಮವದೇವಿ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಕರೆ ತಂದು ಕಾಳಮ್ಮ ಮತ್ತು ದ್ಯಾಮಮ್ಮನಿಗೆ ಸುಮಂಗಲಿಯರು ಉಡಿ ತುಂಬಾ ಕಾರ್ಯಕ್ರಮವನ್ನು ನೆರವೇರಿಸಿದರು. ಅನಂತರ ಪಲ್ಲಕ್ಕಿ ಜೊತೆ ಆರತಿಯನ್ನು ಹಿಡಿದ ಮುತ್ತೈದೆಯರಿಗೆ, ಸುಮಂಗಲಿಯರಿಗೆ ಉಡಿ ತುಂಬಲಾಯಿತು. ದೇವತೆಗಳ ಮಹಾಮಂಗಳಾರತಿ ಕಾರ್ಯಕ್ರಮ ಜರುಗಿತು. ದ್ಯಾಮವದೇವಿ ದೇವಸ್ಥಾನದಿಂದ ಈಶ್ವರ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಕುಲಗೋಡ ರಸ್ತೆಯವರೆಗೆ ಪಲ್ಲಕ್ಕಿಯನ್ನು ಮಾಧ್ಯಮೇಳಗಳೊಂದಿಗೆ ಕರೆತಂದು ಭಕ್ತಿ ಪೂರ್ವಕವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಡಾ.ರಾಜು ಕಂಬಾರ, ರವಿ ಪತ್ತಾರ, ಅರ್ಜುನ ಈ ಪತ್ತಾರ, ಭೀಮಶೆಪ್ಪ ಬಡಿಗೇರ, ರಾಘವೇಂದ್ರ ಬಡಿಗೇರ, ಮೌನೇಶ್ ಬಡಿಗೇರ, ಬಸವರಾಜ ಬಡಿಗೇರ, ಚಂದ್ರು ಬಡಿಗೇರ,ಗಾಳೆಪ್ಪ ಬಡಿಗೇರ, ರುದ್ರಪ್ಪ ಪತ್ತಾರ, ವಿಠ್ಠಲ ಕಂಬಾರ,ಅರ್ಜುನ ಕಾ. ಬಡಿಗೇರ, ಅನಿಲ ಕಂಬಾರ, ಮಹಾದೇವ ಕಂಬಾರ, ಫಕೀರಪ್ಪ ಅಕ್ಕಸಾಲಿಗ, ಅಡಿವೆಪ್ಪ ಕಂಬಾರ, ಮೌನೇಶ ನಾ.ಕಂಬಾರ,ಜಯವಂತ ಬಡಿಗೇರ, ಮೌನೇಶ ಮ. ಕಂಬಾರ ಪ್ರವೀಣ ಪತ್ತಾರ , ಮಹಾದೇವ ಬಡಿಗೇರ, ಮಹಾಂತೇಶ ಕಂಬಾರ, ಓಂಕಾರ್ ಪತ್ತಾರ, ಕಲ್ಲಯ್ಯ ಹಿರೇಮಠ, ಕಲ್ಲಪ್ಪ ಬಡಿಗೇರ, ಮಹಾಂತೇಶ್ ಬಡಿಗೇರ, ಅರ್ಜುನ್ ಬಡಿಗೇರ ಸೇರಿದಂತೆ ಗ್ರಾಮದ ಮಹಿಳೆಯರು ಮಕ್ಕಳು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
