12/12/2025
IMG-20250109-WA0004

ಬೆಳಗಾವಿ-೦೯:ಗುರುವಾರ ನಡೆದ ಬೆಳಗಾವಿ ನಗರದಲ್ಲಿ ಕರವೇ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದ,ಬೆಳಗಾವಿಯ ಅನಗೋಳ ಪ್ರದೇಶದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದವರ ವಿರುದ್ಧ, ಕಾರ್ಯಕ್ರಮ ಆಯೋಜಕ ಶಾಸಕ ಅಭಯ ಪಾಟೀಲ್, ಮಹಾಪೌರ ಹಾಗೂ ಉಪಮಹಾಪೌರರ ವಿರುದ್ಧ ರಾಜ ದ್ರೋಹದ ಪ್ರಕರಣ ದಾಖಲಿಸಲು ಆಗ್ರಹಿಸಿ , ಮಹಾನಗರ ಪಾಲಿಕೆಗೂ ಮುತ್ತಿಗೆ ಹಾಕಲು ಯತ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು.

IMG 20250109 WA0006 - IMG 20250109 WA0006 IMG 20250109 WA0005 - IMG 20250109 WA0005

ಬೆಳಗಾವಿ ಅನಗೋಳ ಪ್ರದೇಶದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡಲು ಜಿಲ್ಲಾಡಳಿತದಿಂದ ಅನುಮತಿ ಪಡೆಯದೇ ಅನಧೀಕೃತವಾಗಿ ಕಾರ್ಯಕ್ರಮ ನಡೆಸಿದ ಶಾಸಕ ಅಭಯ ಪಾಟೀಲ್‌, ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಸವಿತಾ ಕಾಂಬಳೆ, ಉಪ ಮಹಾಪೌರರಾದ ಆನಂದ ಚವ್ಹಾಣ ಹಾಗೂ ಇನ್ನಿತರ ನಗರ ಸೇವಕರ ವಿರುದ್ದ ತಕ್ಷಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವಂಶರಾದ ಶಿವೇಂದ್ರರಾಜೆ ಭೋಸಲೆ ಅವರು ಜೈ ಮಹಾರಾಷ್ಟ್ರ ಎಂದು ನಮ್ಮ ನೆಲದಲ್ಲೇ ಘೋಷಣೆ ಕೂಗುವ ಮೂಲಕ ನಮ್ಮ ನಾಡಿಗೆ ಅವಮಾನ ಮಾಡಿದ್ದು ರಾಜ ದ್ರೋಹವಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ಶಾಸಕ ಅಭಯ ಪಾಟೀಲ್, ಬೆಳಗಾವಿ ಮಹಾಪೌರ ಹಾಗೂ ಉಪಮಹಾಪೌರರ ವಿರುದ್ಧ ರಾಜದ್ರೋಹದ ಪ್ರಕರಣ ಸ್ವಯಂ ಪ್ರೇರಿತರಾಗಿ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಶಾಸಕ ಅಭಯ ಪಾಟೀಲ್‌, ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಸವಿತಾ ಕಾಂಬಳೆ, ಉಪ ಮಹಾಪೌರರಾದ ಆನಂದ ಚವ್ಹಾಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಉಪಾಧ್ಯಕ್ಷ ಗಣೇಶ ರೋಕಡೆ ಹಾಗೂ ಸುರೇಶ್ ಗವನ್ನವರ ನೇತೃತ್ವದಲ್ಲಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

error: Content is protected !!