ಬೆಳಗಾವಿ-೦೬:ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಮಾತ್ರ ಪ್ರಮುಖ್ಯತೆ ನೀಡಬೇಕು ಕನ್ನಡ ನೆಲ ಜಲಕ್ಕಾಗಿ ಕನ್ನಡದ ವೀರ ಪುರುಷರು ವೀರ ವನಿತೆಯರು ಹೋರಾಟ ನಡೆಸಿ ವೀರ ಮರಣ ಹೊಂದಿದ್ದಾರೆ. ಅದರಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ,ವೀರ ಸಿಂಧೂರ ಲಕ್ಷ್ಮಣ, ರಾಜ ವೀರ ಮದಕರಿ ನಾಯಕ, ಬೆಳವಡಿ ಮಲ್ಲಮ್ಮ, ಅಮಟೂರು ಬಾಳಪ್ಪ , ಕೃಷ್ಣ ದೇವರಾಯ , ರಾಜ ವೆಂಕಟಪ್ಪ ನಾಯಕ, ಗಂಡುಗಲಿ ಕುಮಾರರಾಮ, ಹಾಗೂ ಇನ್ನೂ ಅನೇಕ ಮಹಾನ್ ವ್ಯಕ್ತಿಗಳು ಇದ್ದರೂ ಕನ್ನಡ ನೆಲದಲ್ಲಿ ನಮ್ಮವರಿಗೆ ಕರ್ನಾಟಕ ಸರಕಾರ ದಿಂದ ಆಯಾ ಜಿಲ್ಲೆಯ ಜಿಲ್ಲಾಡಾಳಿತ ಮಹಾನಗರ ಪಾಲಿಕೆ ಗಳಿಂದ ಹಾಗೂ ರಾಜಕಾರಣಿಗಳಿಂದ ಅನ್ಯಾಯ ಆಗುತ್ತಿರುವುದು ಖಂಡನೀಯ . ಬೆಳಗಾವಿಯ ಗಡಿಭಾಗದ ಕನ್ನಡ ನೆಲದಲ್ಲಿ ರಾಜಕಾರಣಿಗಳು ವೋಟ್ ಗಾಗಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ವಿಷಾದನೀಯ . ಇದರಿಂದ ಕನ್ನಡಿಗರಿಗೆ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಆಗುತ್ತಿದ್ದು ಕನ್ನಡಿಗರ ಪ್ರತಿಮೆಗಳನ್ನು ಬಿಟ್ಟು ಕನ್ನಡದ ನೆಲಕ್ಕೆ ಸಂಬಂಧ ಇಲ್ಲದವರ ಮೂರ್ತಿಗಳ ಅನಾವರಣ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ , ಇದರಿಂದ ಕನ್ನಡ ಅಸ್ಮಿತೆಗೆ ದಕ್ಕೆ ಆಗುತ್ತಿದೆ . ಕನ್ನಡ ವೀರ ಪುರುಷರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಯಾವುದೇ ಅನುಮತಿ ಜಿಲ್ಲಾಡಳಿತ ಮಹಾನಗರ ಪಾಲಿಕೆ ಗಳಿಂದ ಸಿಗುವುದಿಲ್ಲ. ಆದರೆ ಅದೇ ಕನ್ನಡದ ನೆಲಕ್ಕೆ ಸಂಬಂಧ ಇಲ್ಲದವರ ವ್ಯಕ್ತಿಗಳ ಮೂರ್ತಿಗಳಿಗೆ ಅನುಮತಿ ಸಿಗುತ್ತದೆ ಕಾರಣ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳ ಒತ್ತಡ ಆಗಿರಬಹುದು ಹಾಗೂ ಕರ್ನಾಟಕ ಸರ್ಕಾರದ ಸಂಬಳ ತಿಂದು ಕನ್ನಡ ನೆಲದಲ್ಲಿ ಬದುಕಿ ಗಾಳಿ ನೀರು ಸೇವನೆ ಮಾಡಿ ಕನ್ನಡ ನೆಲಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿರುವ ಅಧಿಕಾರಿಗಳ ದುರಾಡಳಿತ ಕೂಡ ಆಗಿರಬಹುದು. ಇದರಿಂದ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಮಾಡಿ ಕನ್ನಡ ತಾಯಿಗೆ ವಿಷ ಉಣಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಕನ್ನಡಿಗರು ಕುಗ್ಗುವುದಿಲ್ಲ. ಮತ್ತಷ್ಟು ಬಲವಾಗಿ ನಿಂತು ಕೊಳ್ಳುತ್ತಾರೆ.
ಕನ್ನಡ ನೆಲದಲ್ಲಿ ಕನ್ನಡದ ಮಹಾನ್ ವ್ಯಕ್ತಿಗಳ ಮೂರ್ತಿಗೆ ಮೊದಲನೇ ಪ್ರಾಮುಖ್ಯತೆ ಕೊಡದೆ ಹೋದರೆ .ಬೇರೆಯವರಿಗೆ ಅನುಮತಿ ನೀಡಿದರೆ ಕನ್ನಡಿಗರು ಪ್ರತಿ ಒಂದು ವೃತ್ತದಲ್ಲಿ ಗಲ್ಲಿಗಳಲ್ಲಿ ಕನ್ನಡದ ಮಹಾನ್ ವ್ಯಕ್ತಿಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಸಿದ್ಧರಿದ್ದೇವೆ ಕ್ರಾಂತಿ ಪ್ರಾರಂಭ ಆಗಲಿದೆ ಎಂದು ಬೆಳಗಾವಿ ಜಿಲ್ಲಾಡಳಿತಕ್ಕೆ ಮಹಾನಗರ ಪಾಲಿಕೆಗೆ ಯುವ ನಾಯಕ ಮಹೇಶ ಎಸ್ ಶಿಗೀಹಳ್ಳಿ ಎಚ್ಚರಿಕೆ ನೀಡಿದ್ದಾರೆ.