12/12/2025
IMG-20250105-WA0009

ಬೆಳಗಾವಿ-೦೫:ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ಅನಗೋಳದಲ್ಲಿರುವ ಸಂಭಾಜಿ ಮಹಾರಾಜರ ಪುತ್ಥಳಿ ಲೋಕಾರ್ಪಣೆ ಸಲುವಾಗಿ ನಡೆಸುತ್ತಿರುವ ಶುಭಾಯಾತ್ರೆಗೂ ಮುನ್ನ ಶಿವಚರಿತ್ರ ಪರಿಶೀಲನೆ ಯಾತ್ರೆ ಮಾಡಲಿ ಎಂದು ರಾಜಕುಮಾರ ಟೋಪಣ್ಣರ ಆಗ್ರಹಿಸಿದ್ದಾರೆ.
ಅಭಯ ಪಾಟೀಲ್ ತಮ್ಮ ರಾಜಕೀಯ ಲಾಭಕ್ಕಾಗಿ ಶಿವಚರಿತ್ರ ಮೂರು ಬಾರಿ ಉದ್ಘಾಟನೆ ಮಾಡಿದರು. ಅದರ ಖರ್ಚು ವೆಚ್ಚ ಎಷ್ಟಾಗಿದೆ ಎನ್ನುವುದು ಪರಿಶೀಲನೆ ಮಾಡಬೇಕು ಎಂದರು.
ಹಿಂದು ಮಹಾನ್ ಪುರುಷರ ಪುತ್ಥಳಿ ಉದ್ಘಾಟನೆ ಮಾಡಿ ರಾಜಕೀಯ ದುರುದ್ದೇಶಕ್ಕಾಗಿ ಹಿಂದುಗಳಿಗೆ ಅಪಮಾನ ಮಾಡುತ್ತಿದ್ದಾರೆ. ಅವರು ನಿಜವಾದ ಹಿಂದುಗಳಾಗಿದ್ದರೆ ಈ ರೀತಿ ಶಿವ ಚರಿತ್ರ ಲೋಕಾರ್ಪಣೆ ಮಾಡಿ ಅಪಮಾನ ಮಾಡುವ ಕೆಲಸ ಮಾಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವ ಚರಿತ್ರ ವಿದ್ಯುತ್ ಅಂಕಲಾರದ ಸಲುವಾಯಿ ಒಂದು ಬಾರಿ, ಆಡಿಯೋ ಸಲುವಾಗಿ ಒಂದು ಬಾರಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿ ಮಗದೊಂದು ಬಾರಿ ಉದ್ಘಾಟನೆ ಮಾಡಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಈಗ ಸಂಭಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆಯಲ್ಲಿ ಜಿಲ್ಲಾಡಳಿತ ಆದೇಶ ದಿಕ್ಕರಿಸಿ ಹಿಂದುಗಳ ಭಾವನೆಯೊಂದಿಗೆ ಅಭಯ ಪಾಟೀಲ್ ಚೆಲ್ಲಾಟವಾಡುತ್ತಿದ್ದಾರೆ. ಜನರು ಯಾರೂ ಇವರ ಕರೆಗೆ ಓಗೊಡಬೇಡಿ. ಇವರು ನಕಲಿ ಹಿಂದುಗಳು ಎಂದು ಆರೋಪಿಸಿದ್ದಾರೆ.
ಹಿರೇಬಾಗೇವಾಡಿ ಗ್ರಾಮದಲ್ಲಿ ಶಾಸಕ ಅಭಯ ಪಾಟೀಲ್ ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡಿ ಕಾಮಗಾರಿ ಪೂರ್ಣಗೊಳಿಸದೆ ಉದ್ಘಾಟನೆ ಮಾಡಿದ್ದರು. ಇಲ್ಲಿನ ಬಸವೇಶ್ವರ ಮೂರ್ತಿಯ ಕಾಮಗಾರಿ ಪೂರ್ಣಗೊಳಿಸಿ ಹಿರೇಬಾಗೇವಾಡಿ ಯುವಕರು ಅದನ್ನು ಮತ್ತೊಮ್ಮೆ ಉದ್ಘಾಟನೆ ಮಾಡಿದರು. ಈಗ ಅನಗೋಳದಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿ ಕಾಮಗಾರಿ ಪೂರ್ಣಗೊಂಡಿಲ್ಲ. ಮಹಾನಗರ ಪಾಲಿಕೆಯಿಂದ ಹಸ್ತಾಂತರ ಮಾಡಿಲ್ಲ. ಶಾಸಕ ಅಭಯ ಪಾಟೀಲ್ ಗೆ ಹಿಂದುಗಳ ಮಹಾನ್ ಪುರುಷರು ಕೇವಲ ರಾಜಕೀಯ ಅಸ್ತ್ರವಾಗಿದೆಯೇ ? ಅಭಯ ಪಾಟೀಲ್ ಹಿಂದುವೇ ? ಹಿಂದು ಥರ್ಮದ ಮಹಾನ್ ಪುರಷರ್ ಪುತ್ಥಳಿ ಕಾಮಗಾರಿ ಪೂರ್ಣಗೊಳ್ಳದೆ ಅಪಮಾನ ಮಾಡುವ ಅಭಯ ಪಾಟೀಲ್ ವಿರುದ್ಧ ಆರ್ ಎಸ್ಎಸ್, ಭಜರಂಗದಳ ಸುಮ್ಮನೆ ಕುಳಿತ್ತಿದ್ದು ಏಕೆ ಎಂದು ಪ್ರಶ್ನಿಸಿದರು.
ಶಾಸಕ ಅಭಯ ಪಾಟೀಲ್ ಜನಪ್ರಿಯತೆ ‌ಕಡಿಮೆಯಾಗಿದೆ. ಆದ್ದರಿಂದ ಜನರಿಗೆ ದಿಶಾಬುಲ್ ಮಾಡಲು ಹೊರಟ್ಟಿದ್ದಾರೆ‌. ಇವರೊಬ್ಬ ನಕಲಿ ಹಿಂದು ಎಂದು ಪ್ರಕಟಣೆಯಲ್ಲಿ ವಾಗ್ದಾಳಿ ನಡೆಸಿದರು.

error: Content is protected !!