ಬೆಳಗಾವಿ-೦೩:ಗುರುವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿ ಗಳಿಗೆ ಮನವಿ ಅರ್ಪಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಇನ್ನಿತರ ವತಿಯಿಂದ ಮನವಿ ಅರ್ಪಿಸಿದ ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಕೆಲ ಖಾಸಗಿ ಬ್ಯಾಂಕಗಳು ಬೆಳಗಾವಿ ಜಿಲ್ಲೆಯ ಸುತ್ತುಮುತ್ತಲಿನ ಗ್ರಾಮಸ್ಥರಿಗೆ ತಮ್ಮ ಪ್ರತಿನಿಧಿಗಳ ಮೂಲಕ ವೈಯಕ್ತಿಕ ಸಾಲವನ್ನು ಮಂಜೂರು ಮಾಡಿ, ಪೂರ್ಣ ಸಾಲವನ್ನು ಕೊಡದೇ ಮೋಸ ಮಾಡಿರುತ್ತಾರೆ. ಬ್ಯಾಂಕಿನ ಪ್ರತಿನಿಧಿಗಳು ಸಾಲವನ್ನು ಮಂಜೂರು ಮಾಡಿ ಗ್ರಾಮಸ್ಥರ ಖಾತೆಗೆ ಜಮೆ ಮಾಡಿ, ಅವರ ಖಾತೆಯಿಂದ ಹಣ ತೆಗೆದು ಮಂಜೂರಾದ ಸಾಲದ ಮೊತ್ತವನ್ನು ನೀಡಿರುವುದಿಲ್ಲ. ಮಂಜೂರಾದ ಸಾಲವನ್ನು ಕಂತುಗಳಲ್ಲಿ ಅಲ್ಪ ಸ್ವಲ್ಪ ಮೊತ್ತವನ್ನು ಕೊಟ್ಟಿರುತ್ತಾರೆ. (ಅಂದರೆ ಶೇ 35% ಸಾಲದ ಮೊತ್ತವನ್ನು ಕೊಟ್ಟಿರುತ್ತಾರೆ) ಹೀಗೆ ಮಂಜೂರಾದ ಪೂರ್ಣ ಸಾಲವನ್ನು ನೀಡದೇ ಎಜೆಂಟರು ಈಗ ಕಾಣೆಯಾಗಿದ್ದಾರೆ
ಈ ರೀತಿಯಾಗಿ ಗೋಕಾಕ ತಾಲೂಕಿನ ನೆಲಗಂಟೆ, ಮೂಡಲಗಿ ಹಾಗೂ ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮಸ್ಥರಿಗೆ ಮೋಸ ಮಾಡಿರುವುದು ಖಂಡನೀಯ. ಬ್ಯಾಂಕಿನವರು ಸಾಲ ವಸೂಲಾತಿಗಾಗಿ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ ಹಾಗೂ ಮನೆಗಳಿಗೆ ನೋಟಿಸು ಹಚ್ಚುತ್ತಿದ್ದಾರೆ ಹಾಗೂ ಅವರ ಮನೆಗಳನ್ನು ಜಪ್ಪು ಮಾಡುತ್ತಾರೆ ಎಂದು ಬಡ ಗ್ರಾಮಸ್ಥರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಸಾಲವನ್ನು ಪಡೆಯದೇ ಗ್ರಾಮಸ್ಥರು ಮೋಸ ಹೋಗಿರುತ್ತಾರೆ. ಹೀಗಿರುವಾಗ ಸಾಲ ಭರಣ ಮಾಡಲು ಹೇಗೆ ಸಾಧ್ಯ?
ಅತಿ ಪ್ರಾಮುಖ್ಯತೆಯಲ್ಲಿ ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಡಬೇಕೆಂದು ಮನವಿ ಮೂಲಕ ಆಗ್ರಹಿಸುತ್ತಾರೆ.
ಅದಲ್ಲದೇ ಸದರಿ ಪ್ರಕರಣವು ವಿಲೆವಾರಿ ಆಗುವವರೆಗೆ, ಗ್ರಾಮಸ್ಥರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು ಹಾಗೂ ಸಾಲ ವಸೂಲಿಗೆ ಹೋಗಬಾರದೆಂದು ಬ್ಯಾಂಕಿನವರಿಗೆ ಆದೇಶ ನೀಡಬೇಕೆಂದು ಮನವಿ ಮೂಲಕ ಜಿಲ್ಲಾಧಿಕಾರಿ ಗೆ ಗುರುವಾರ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ರಾಘವೇಂದ್ರ ನಾಯಿಕ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.