ಮೂಡಲಗಿ-೨೭: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಶಿವಾನಂದ ಬೆನ್ನಳ್ಳಿ ಮತ್ತು ಅವರ ಸಹೋದರನ ಮಗಳು ಶಿಲ್ಪಾ ಪ್ರವೀಣ ಬೆನ್ನಳ್ಳಿ ಇವರು ಪೋಲಿಸ್ ಇಲಾಖೆಯಲ್ಲಿ PSI ಆಗಿ ಆಯ್ಕೆಯಾದರು.
ಇವರು ಬೆಳಗಾವಿ ಜಿಲ್ಲೆಯ ಇಟ್ನಾಳ ಗ್ರಾಮದವರಾಗಿರುತ್ತಾರೆ.
ವಿಶೇಷವೆಂದರೆ ಈ ಇಬ್ಬರೂ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರನೇ RANK ಪಡೆದಿದ್ದು ಇಡೀ ಗ್ರಾಮವೇ ಹೆಮ್ಮೆಪಡುವಂತಾಗಿದೆ.
ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶಿವಾನಂದ ಅವರು, ನಾವು ಸಾಧನೆ ಮಾಡಬೇಕೆನ್ನುವ ಆಸೆ ತಮ್ಮ ತಂದೆ – ತಾಯಿಗಳದ್ದಾಗಿತ್ತು. ಇದಕ್ಕೆ ಸಂಪೂರ್ಣ ಸಹಕಾರ ನೀಡಿದವರು ನಮ್ಮ ಹಿರಿಯರಾದ ಮಹಾಂತೇಶ ಬೆನ್ನಳ್ಳಿ, ತೇರದಾಳದ ನಮ್ಮ ಮಾವ, ಅತ್ತೆ ಹಾಗೂ ನಾಗನೂರಿನ ಸಕ್ರೆಪ್ಪಗೋಳ ಕುಟುಂಬ, ಅದೇ ರೀತಿ ಧಾರವಾಡದ ವಿದ್ಯಾಪೋಷಕ ಎನ್. ಜಿ. ಓ. ಸಂಸ್ಥೆ ಈ ಸಂಸ್ಥೆಯ ಲಾಭವನ್ನು ಎಲ್ಲ ಬಡ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆನ್ನುವ ಆಸೆ ನನ್ನದು ಎಂದರು.
ಮಹಿಳಾ ಕೋಟಾದಲ್ಲಿ ಪಿಎಸ್ಐ ಆಗಿ ಅಯ್ಕೆಯಾದ ಕು. ಶಿಲ್ಪಾ ಅವರು, ಸತತ ಪ್ರಯತ್ನವೇ ಸಾಧನೆಯ ರಹಸ್ಯ. ತಾಳಿದವನು ಬಾಳಿಯಾನು ಎಂಬ ಗಾದೆಗಳೇ ನನ್ನ ಸ್ಪರ್ಧಾ ಜೀವನದ ಸಾಲುಗಳು. ಗಂಡು – ಹೆಣ್ಣು ತಾರತಮ್ಯವಿಲ್ಲದ ಕುಟುಂಬ ನನ್ನದು ಅವರು ಹೆಮ್ಮೆ ಪಡುವ ಮಗಳಾಗಬೇಕೆಂದು ನನ್ನ ಧ್ಯೇಯ ತಂದೆ ತಾಯಿ ಚಿಕ್ಕಪ್ಪ ಮತ್ತು ಅಣ್ಣನ ಸಹಕಾರವೇ ಈ ಸಾಧನೆಯ ಮೂಲ ಇದರ ಜೊತೆಗೆ ಗುರುಗಳಾಗಿ ಮಾಗ೯ದಶ೯ನ ನೀಡಿದವರು ಶಿವಾನಂದ ಮತ್ತು ಪ್ರಶಾಂತ ಅವರು ಎಂದರು.