ಬೈಲಹೊಂಗಲ-೨೩: ಸಕಲ ಜೀವಿಗಳಿಗೆ ಅನ್ನ ಹಾಕೊ ಅನ್ನದಾತನ ದಿನಾಚರಣೆ ಗಲ್ಲಿಯಿಂದ ದಿಲ್ಲಿಯ ವರೆಗೆ ನಡೆಯುವಂತಾಗಲು ಪ್ರತಿಯೊಬ್ಬರೂ ಪರಿಶ್ರಮಿಸಿದಾಗ ರೈತನಿಗೆ ತಕ್ಕ ಗೌರವ ಸಲ್ಲಲಿದೆ ಎಂದು ಜಾಲಿಕೊಪ್ಪ ತಪೊವನದ ಪೂಜ್ಯ ಶಿವಾತ್ಮಾನಂದ ಗೂರೂಜಿ ಹೇಳಿದರು.
ಸಮೀಪದ ಮಲಪ್ರಭಾ ದಡದಲ್ಲಿರುವ ತಪೊವನದಲ್ಲಿ ಸೋಮವಾರ ಜರುಗಿದ ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್‍ರವರು 122ನೇ ಜನ್ಮ ದಿನಾಚರಣೆ, ಹಾಗೂ ಮಾಜಿ ಕೇಂದ್ರ ಮಂತ್ರಿ ಬಾಬಾಗೌಡರ ಸ್ಮರಣೆ ನಿಮಿತ್ಯ
ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆಯ ಸಾನಿಧ್ಯವಹಿಸಿ ಮಾತನಾಡಿ, ಯಾವ ಲಾಭವನ್ನು ಬಯಸದೆ ದುಡಿದು ಪ್ರಪಂಚಕ್ಕೆ ಅನ್ನ ಹಾಕೊ ರೈತನನ್ನು ವರ್ಷಕ್ಕೆ ಒಂದು ದಿನ ನೆನೆಯದೆ ಪ್ರತಿ ಅನ್ನದ ತುತ್ತು ತಿನ್ನುವಾಗ ರೈತನ ಶ್ರಮವನ್ನು ಶ್ಲಾಘಿಸಬೇಕು. ಭೂಮಿ, ನೀರು ವಾತಾವರಣವನ್ನು ಹಾಳುಗೆಡುವ ಕಾರ್ಯವನ್ನು ರೈತರು ಮಾಡಬಾರದು. ಮುಂದೊದು ದಿನ ನೀರಿಗಾಗಿ ಆಹಾಕಾರ ವಾಗುವ ಮೊದಲೆ ಎಚ್ಚೆತ್ತುಕೊಳ್ಳಬೇಕು. ಉತ್ತಮ ಅರೊಗ್ಯಕ್ಕಾಗಿ ಸಾವಯವ ಕೃಷಿ ಬಗ್ಗೆ ಹೆಚ್ಚು ಯೋಚಿಸುವ ಕಾಲ ಬಂದಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕೃಷಿ ಕುಟುಂಬದಿಂದ ಜನಿಸಿ ಭಾರತದ 5 ನೇ ಪ್ರಧಾನಿಯಾಗಿದ್ದ ಚೌಧರಿ ಚರಣಸಿಂಗ್ ಅವರ ಜನ್ಮದಿನವನ್ನ ರಾಷ್ಟ್ರೀಯ ರೈತ ದಿನಾಚರಣೆ ಆಚರಿಸುವ ಮೂಲಕ ಕೃಷಿಯನ್ನೆ ನಂಬಿ ಎಲ್ಲರಿಗೂ ಅನ್ನ ನೀಡುವಲ್ಲಿ ಪ್ರಮುಖ ಪಾತ್ರವಹಿಸುವ
ರೈತರಿಗಾಗಿ ಸಂದ ಗೌರವವಾಗಿದೆ. ಚೌದರಿ ಚರಣ್ ಸಿಂಗ್ ಅವರು ಅತ್ಯಂತ ಸರಳ ಜೀವಿಗಳು, ಸೂಕ್ಷ್ಮ ಸಂವೇದಿಗಳು. ರೈತರ
ಮತ್ತು ಕೂಲಿ ಕಾರ್ಮಿಕರ ಮೇಲೆ ತೀವ್ರತರ ಕಳಕಳಿಯನ್ನು ಹೊಂದಿದ್ದರು. ಉತ್ತರ ಪ್ರದೇಶದ
ಮುಖ್ಯಮಂತ್ರಿಗಳಾಗಿ, ಭಾರತದ ಪ್ರಧಾನಿ ಹಾಗೂ ಉಪ ಪ್ರಧಾನಿಯಾಗಿ ಕೃಷಿಕರ
ಪರವಾಗಿ ಭೂ ಸುಧಾರಣೆ ಮತ್ತು ಹಿಡುವಳಿಗಾಗಿ ಸದಾ ರೈತರ ಪರವಾಗಿ ಹಲವಾರು ನೀತಿಗಳನ್ನು ತರುವಲ್ಲಿ
ಯಶಸ್ವಿಯಾಗಿದ್ದ ಇವರ ಜನ್ಮದಿನವನ್ನು ರಾಷ್ಟ್ರೀಯ ರೈತ ದಿನವನ್ನಾಗಿಸಿ ಆಚರಿಸುತ್ತಿರುವದು ಶ್ಲಾಘನೀಯವಾಗಿದೆ. ಅಲ್ಪಾವಧಿಗೆ ಪ್ರಧಾನ ಮಂತ್ರಿಗಳಾಗಿದ್ದರು
ರೈತ ಪರವಾದ ಹಲವಾರು ನೀತಿಗಳನ್ನು ಪ್ರಕಟಿಸಿದ್ದರು. ಇವರ ಪ್ರಯತ್ನಗಳಿಂದಾಗಿ ಎಲ್ಲ ಸಣ್ಣ
ಮತ್ತು ಬಡ ರೈತರುಗಳನ್ನು ದೊಡ್ಡ ಭೂ ಮಾಲಿಕರಿಂದ ಉಳಿಸಿ ರೈತರನ್ನು ಬದುಕಿಸಿದ ಮಹಾನ್ ಚೇತನವಾಗಿದ್ದ ಇವರು ದೇಶದ ರೈತರ ಬಗ್ಗೆ ದುರದೃಷ್ಟಿ ಹೊಂದಿದ್ದರಿಂದ ಬ್ರಿಟಿಷ್ ರಿಂದ ರಚಿಸಿದ ರೈತರ ಬೆಳೆ ಮಾರಾಟದ ಕಾನೂನು ಬದಲಾಗಬೇಕು ಕಂಪನಿಗಳು ತಯಾರಿಸುವ ವಸ್ತುಗಳ ಬೆಲೆಯನ್ನು ಅವರೆ ನಿರ್ಧರಿಸುವಂತೆ ರೈತರ ಬೆಳೆಗಳ ಬೆಲೆ ರೈತರೆ ನಿರ್ಧರಿಸಬೇಕು ಎಂಬ ಪರಿಕಲ್ಪನೆ ಕೊಟ್ಟಿದ್ದ ಇವರ ಮನದಾಳದ ಇಂಗಿತ ಇನ್ನುವರೆಗೂ ಈಡೆರದೆ ಇರುವದು ರೈತರಿಗೆ ಅಂಟಿದ ಶಾಪವಾಗಿದೆ ಎಂದರು.
ವೇದಿಕೆಯ ಮೇಲೆ ಮಾಜಿ ಜಿಪಂ ಸದಸ್ಯ ಬಸನಗೌಡ ಚಿಕ್ಕನಗೌಡರ, ಮಾಜಿ ಪುರಸಭೆ ಸದಸ್ಯ ಮಡಿವಾಳಪ್ಪ ಹೋಟಿ, ಶಂಕ್ರೇಪ್ಪ ಯರಡಾಲ, ಯಲ್ಲಪ್ಪ ಹುಲಗಣ್ಣವರ ಇದ್ದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹುಂಬಿ, ಸಚಿನ ಪಟಾತ, ಗೂಳಪ್ಪ ಹೋಳಿ, ಸಂಜು ಬೋಳಶೆಟ್ಟಿ, ರಾಜು ಅಂಗಡಿ, ಅಶೋಕ ಪೆಂಟೆದ, ಮಹಾಂತೇಶ ಕಲಬಾವಿ, ಮಡ್ಡೆಪ್ಪ ಬೋಳಶೆಟ್ಟಿ, ಮಡ್ಡೆಪ್ಪ ಮೂಲಿಮನಿ, ಮಹಾಂತೇಶ ಅಸುಂಡಿ, ಉಳವಪ್ಪ ಕಲಬಾಂವಿ,
ಗ್ರಾಮದ ರಾಜು ಬೋಳಶೆಟ್ಟಿ, ರಮೇಶ ಕರಡಿಗುದ್ದಿ, ಸೋಮಪ್ಪ ಅಂಗಡಿ, ಸುರೇಶ ಯಕ್ಕುಂಡಿ, ಈರಯ್ಯ ಸೊಲ್ಲಪೂರಮಠ ಸಿದ್ದಲಿಂಗ ಬೋಳಶೆಟ್ಟಿ, ಫಕೀರಪ್ಪ ಹೋಳಿ ಇತರರು ಇದ್ದರು.
ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಶ್ರೀಶೈಲ ಯಡಳ್ಳಿಯವರನ್ನ ಸತ್ಕರಿಸಲಾಯಿತು.
*ರೈತರ ಜೀವನ ಸಾಲದಿಂದ ಮುಕ್ತಿ ಹೊಂದದೆ ರೈತರು ಕಂಪನಿಗಳ ಮಾಲಿಕರಿಗೆ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿ ಅವರು ಹೇಳಿದ ದರಕ್ಕೆ ಕೊಡುವ ಕಾರ್ಮಿಕನಾಗಿರುವದು ಯಾಂತ್ರಿಕ ಜಗತ್ತಿನಲ್ಲಿ ದುರಾದೃಷ್ಟಕರ, ರೈತರು ಕೃಷಿ ಕಾಯಕದಲ್ಲಿ ನಂಬಿಕೆ, ವಿಶ್ವಾಸ ಮತ್ತು ತಾಳ್ಮೆಯಿಂದ ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಂಡು ಹೊದಾಗ ಮಾತ್ರ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯ ಸರ್ಕಾರದ ಕೆಲ ಅನಿಷ್ಟ ಕಾರ್ಯಕ್ರಮದಿಂದ ಕೃಷಿ ಕಾರ್ಯಕ್ಕೆ ಹಳ್ಳಿಗಳಲ್ಲಿ ಜನ ಸಿಗದೆ ಕೃಷಿಕ್ಷೇತ್ರ ಭಾರವಾಗುತ್ತಿದೆ
ಡಾ.ವಿ.ಆಯ್.ಪಾಟೀಲ,ಮಾಜಿ ಶಾಸಕರು
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬಾಬಾಗೌಡ ಪಾಟೀಲರ ಅಭಿಮಾನ ಬಳಗದ ರಾಜ್ಯಾಧ್ಯಕ್ಷ ಶ್ರೀಕಾಂತ್ ಶಿರಹಟ್ಟಿ ಇದ್ದರು