22/12/2024
IMG-20241220-WA0001

ಬೆಳಗಾವಿ-೨೦:ಭಾರತ‌ ಸರ್ಕಾರದ ಮಾನ್ಯ ಗೃಹ ಮತ್ತು ಸಹಕಾರ ಮಂತ್ರಿಗಳಾದ  ಅಮಿತ್ ಶಾ ರವರ ಹೇಳಿಕೆಯ ಸಂಪೂರ್ಣ ತುಣುಕನ್ನು ಹಾಕದೆ ತಮಗೆ ಬೇಕಾದಷ್ಟು ಭಾಗಶಃ ತುಣುಕನ್ನು ಬಳಸಿ, ಬೇರೆಯೇ ರೀತಿಯಲ್ಲಿ ಅರ್ಥೈಸುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಸ್ತರಿಸಿ, ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಅಂಬೇಡ್ಕರ್ ಅವರನ್ನ ಅವಹೇಳನ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ  ಗುರುವಾರ ಸಂಜೆ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಬೆಳಗಾವಿ ನಗರದಲ್ಲಿ ಪ್ರತಿಭಟನೆ ಮೂಲಕ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಪೋಲಿಸರು ಭಾ.ಜ.ಪಾ ಕಾರ್ಯಕರ್ತರನ್ನು ಬಂಧಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ರಾಷ್ಟ್ರೀಯ ಓ.ಬಿ.ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡ್ರ, ಮಹಾನಗರ ಜಿಲ್ಲಾಧ್ಯಕ್ಷರಾದ ಮಹಾದೇವ ಧರೆನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಶ್ರೀ ದೇಸಾಯಿ, ಆನಂದ ಅತ್ತುಗೋಳ,ಯುವರಾಜ ಜಾಧವ,ಯಲ್ಲೇಶ್ ಕೊಲಕಾರ,ಪ್ರಸಾದ್ ದೇವರಮನಿ, ದಿಗ್ವಿಜಯ್ ಸಿದ್ನಾಳ,ಪಂಡಿತ್‌ ಓಗಲೆ,ಮನೋಜ್ ಪಾಟೀಲ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!