23/12/2024
IMG-20240115-WA0026

ಚಾಮರಾಜನಗರ-15: ಕರಡಿ ಹಳ್ಳ ಕುಂಬೇಶ್ವರ ಜಾತ್ರೆ ವಿಜೃಂಬಣೆಯಿಂದ ನಡೆಯಿತು. ಚಾಮರಾಜನಗರ ತಾಲ್ಲೂಕಿನ ಚಂದಕವಾಡಿ ಹೋಬಳಿಗೆ ಸೇರಿದ ಕುಂಬೇಶ್ವರ ಕಾಲೋನಿ ಸಮೀಪದ ಕರಡಿಹಳ ಕುಂಬೇಶ್ವರ ಜಾತ್ರೆಯು ಪ್ರತಿ ವರ್ಷದಂತೆ ಸಂಕ್ರಾಂತಿಯ ಹಬ್ಬದ ದಿನದಂದು ನಡೆಯಿತು.ಬೆಳಗ್ಗೆ ಮಹದೇಶ್ವರ ಸ್ವಾಮಿಯ ವಿಗ್ರಹವನ್ನು ಸವರ್ಣಾವತಿ ಹೊಳೆಯ ನೀರಿನಲ್ಲಿ ಅಭಿಷೇಕ ಮಾಡಿ ನಂತರ ಮೆರವಣಿಕೆ ಯಲ್ಲಿ ದೇವಸ್ಥಾನಕ್ಕೆ ತರಲಾಯಿತು.ಮರವಣಿಗೆಯಲ್ಲಿ ಹುಲಿವಾಹನ, ದೇವರಸತ್ತಿಗೆ, ಡೊಳ್ಳು ಕುಳಿತ ಸೇರಿದತೆ ಇನ್ನು ಹಲವು ಕುಳಿತಗಳಿದ್ದವು. ಮಹಾ ಮಂಗಳಾರತಿಯ ನಂತರ ಭಕ್ತಧಿಗಳಿಗೆ ಪ್ರಸಾದ ನೀಡಲಾಯಿತು. ಜಾತ್ರ ಮಹೋತ್ಸವಕ್ಕೆ ಬೆಂಗಳೂರು, ಮೈಸೂರು, ಚಾಮರಾಜನಗರ ಸುತ್ತಮುತ್ತಲಿನ ಜನರು ಮತ್ತು ಮೆರವಣಿಗೆಯಲ್ಲಿ ದೇವಸ್ಥಾನದ ಟ್ರಸ್ಟಿಗಳಾದ ವಾಟಾಳ್ ಬಾಬು, ನಾಗರಾಜು, ಪುಟ್ಟಸ್ವಾಮಿ,ಸಿದ್ದಪ್ಪ, ಋಷಬೇಂದ್ರ, ಕುಮಾರ, ವೆಂಕಟಶೆಟ್ಟಿ, ರಾಚಪ್ಪ, ಮಂದೇಶ್, ಕಮಲೇಶ್, ಕಾರ್ ನಾಗೇಶ್, ನಾರಾಯಣ, ಶೇಷಪ್ಪ, ಕುಂಬೇಶ್ವರ ಯುವಕರ ಸಂಘ ಹಾಗೂ ೮ ಗ್ರಾಮದ ಯಜಮಾರು ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು.

error: Content is protected !!