23/12/2024
IMG-20241216-WA0032
ಬೆಳಗಾವಿ-೧೭: ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸ್ಥಿತಿ-ಗತಿಗಳನ್ನು ಸುಧಾರಿಸಲು ಮತ್ತು ಗ್ರಾಮೀಣ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಸರ್ಕಾರ ಸ್ವ-ಸಹಾಯ ಸಂಘಗಳ ಮೂಲಕ ಸ್ವಾವಲಂಬಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ಮಹಿಳೆಯರು ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳಡಿಯಲ್ಲಿ ವಿವಿಧ ಬಗೆಯ ಸರಕು ಸಾಮಗ್ರಿಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ತಮ್ಮ ಕುಟುಂಬಗಳಿಗೆ ಆರ್ಥಿಕ ನೆರವು ಪಡೆಯಬಹುದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ತಿಳಿಸಿದರು.
ಮಚ್ಚೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ಸಂಜೀವಿನಿ ಯೋಜನೆಯಡಿ ಗೋಕಾಕ್ ಮತ್ತು ಮೂಡಲಗಿ ತಾಲೂಕಿನ ಜಿಪಿಎಲ್.ಎಫ್ ಅಧ್ಯಕ್ಷರುಗಳಿಗೆ ಮಂಗಳವಾರ (ಡಿ.17) 3 ದಿನಗಳ ವಸತಿ ಸಹಿತ “ಪರಿವರ್ತನೆಯ ಹೆಜ್ಜೆ” ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದರಿ ಮೂರು ದಿನಗಳ ತರಬೇತಿಯಲ್ಲಿ ಭೋದಿಸುವ ಅನೇಕ ವಿಷಯಗಳನ್ನ ಸಂಪೂರ್ಣವಾಗಿ ಕ್ರಿಯಾಶೀಲತೆಯಿಂದ ಕಲಿತುಕೊಳ್ಳಬೇಕು. ತಮ್ಮ ದೈನಂದಿನ ಕಚೇರಿ ನಿರ್ವಹಣೆಯಲ್ಲಿ ಬರುವ ಸಾಮಾನ್ಯ ಸಂದೇಹಗಳನ್ನು ಮುಕ್ತವಾಗಿ ಚರ್ಚಿಸಿ ತರಬೇತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಜಿ.ಪಂ ಉಪ ನಿರ್ದೇಶಕ ಬಸವರಾಜ ಹೆಗ್ಗನಾಯಕ ಹೇಳಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ ಮಾತನಾಡಿ ತರಬೇತಿಯ ಸದುಪಯೋಗ ಪಡೆದುಕೊಂಡು ತಮ್ಮ ಕುಟುಂಬದ ನಿರ್ವಹಣೆಗೆ ಗಮನ ಹರಿಸಬೇಕು ಎಂದು ಹೇಳಿದರು.
ತರಬೇತಿಯಲ್ಲಿ ಜಿಲ್ಲಾ ವ್ಯವಸ್ಥಾಪಕ ಕಿರಣ್ ಶಿಂಧೆ, ಮರಿಗೌಡ, ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಣಗೌಡ, ಗೋಪಾಲಕೃಷ್ಣ, ಡಿಪಿಆರ್.ಸಿ ಸಿಬ್ಬಂದಿಗಳಾದ ಮಂಜುಳಾ ಹೊನಕುಪ್ಪಿ, ಸೋನು ಮುತ್ನಾಳ, ಪ್ರಿಯಾ ಸುತಾರ, ಶಾಂತಾರಾಮ್ ಗೋಧೂಳಿ, ರಮೇಶ್ ದೇಸಾಯಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನ್ ಪೂಜಾರ್, ವಾಣಿಶ್ರೀ ರಾಠೋಡ, ಚಂದ್ರಶೇಖರ ಕಲಾಲ, ಗಂಗವ್ವ ಕಂಕಣವಾಡಿ ಮತ್ತು ಜಿಪಿಎಲ್ ಎಫ ಅಧ್ಯಕ್ಷರಾದ ಗೀತಾ ಹರಿಜನ, ಶಾಂತವ್ವ ಭೋವಿ, ರಮೇಶ್ ಪೂಜಾರಿ, ಹರ್ಷ ಶೇಳಕಾ, ಪ್ರೇಮಾ ಗಾಣಿಗೇರ, ಸಂಗೀತ ಗುರೆ, ಸೈರಾಭಾನು ನದಾಫ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!