23/12/2024
collage_2_6-1734270054323

ಬೈಲಹೊಂಗಲ-೧೫:ನೆಮ್ಮದಿ ಜೀವನಕ್ಕೆ ಆರೋಗ್ಯದ ಜೋತೆಗೆ ಧಾರ್ಮಿಕ ಸಂಸ್ಕಾರದ ಅರಿವು ಅತ್ಯಗತ್ಯವಾಗಿದ್ದು ಅಂತಹ ಸಂಸ್ಕಾರ ಸಮಾಜದಲ್ಲಿ ದೊರೆಯಬೆಕಾದರೆ ಧಾರ್ಮಿಕ ಕಾರ್ಯಗಳಿಂದ ಮಾತ್ರ ಸಾಧ್ಯ ಎಂದು ವೇದಮೂರ್ತಿ ಅಡವಯ್ಯ ಕಲ್ಯಾಣಮಠ ಹೇಳಿದರು.

ಅವರು ಸಮೀಪದ ಹೊಸೂರ ಗ್ರಾಮದಲ್ಲಿ ಭಾನುವಾರ ನಡೆದ ವೀರಭದ್ರೇಶ್ವರ ಜಾತ್ರಾಮಹೋತ್ಸವದಲ್ಲಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಜನರು ಯಾಂತ್ರಿಕ ಬದುಕಿಗೆ ಸಿಕ್ಕು ಹಣ ಮತ್ತು ಅಧಿಕಾರಗಳಿಸಲು ದುಂಬಾಲು ಬಿದ್ದಿದ್ದು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಬೇಕಾದ ಆಚಾರ ವಿಚಾರಗಳೆ ಮಾಯವಾಗಿತ್ತಿವೆ. ಇದರಿಂದ ಪ್ರತಿಯೊಬ್ಬರಲ್ಲಿ ಹಣ ಇದೆ ಹೊರತು ನೆಮ್ಮದಿ ಇಲ್ಲ. ಹಣದಿಂದ ಶ್ರೀಮಂತಿಕೆ ಅಳಿಯದೆ ಅವರಲ್ಲಿರುವ ಸಾತ್ವಿಕ ಗುಣಗಳಿಂದ ಸಂಸ್ಕಾರಯುತ ನೆಮ್ಮದಿ ಬದುಕನ್ನು ಸಮಾಜದಲ್ಲಿ ನಡೆಸುವ ವ್ಯಕ್ತಿಯೆ ನಿಜವಾದ ಶ್ರೀಮಂತವಾಗಿದ್ದಾನೆ ಎಂದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮತ್ತು ಸೋಮಲಿಂಗಪ್ಪ ಕೋಟಗಿ ಮಾತನಾಡಿ, ಜಾತ್ರೆಗಳ ಮೂಲಕ ಗ್ರಾಮದಲ್ಲಿ‌ ಧಾರ್ಮಿಕ ವಿಚಾರಗಳನ್ನು ಬಿತ್ತುವದರೊಂದಿಗೆ ಯುವಕರಲ್ಲಿ ಧಾರ್ಮಿಕ ಸಂಸ್ಕಾರ ಮೂಡಿಸುವ ಇಂತಹ ಜಾತ್ರೆಗಳು ಗ್ರಾಮದ ಹೆಮ್ಮೆ ಎಂದರು.
ಬೆಳಿಗ್ಗೆ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಮೂರ್ತಿಗಳಿವೆ ಅಭಿಷೇಕ ಹಾಗೂ ವಿಶೇಷ ಪುಷ್ಪಾಲಂಕಾರ ಪೂಜೆ ನೆರವೇರಿಸಲಾಗಿತ್ತು. ದೇವರ ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾಧ್ಯಮೇಳದೊಂದಿಗೆ ಗ್ರಾಮದ ಪುರವಂತರು, ಸುಮಂಗಲಿಯರ ಆರತಿಯೊಂದಿಗೆ ಸಂಚರಿಸಿತು. ಪುರವಂತರು ವೀರಭದ್ರೇಶ್ವರ ಓಡಪು ಹೇಳಿ ಅಗ್ನಿಕುಂಡಲ ಹಾಯ್ದರು. ಜಾತ್ರೆಗೆ ಅಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ ಸೇವೆ ಮಾಡಲಾಗಿತ್ತು ಜಾತ್ರೆಯಲ್ಲಿ ಸೇವೆಗೈದ ಮಡಿವಾಳಪ್ಪ ಬೆಟಗೆರಿ, ಸೋಮಲಿಂಗಪ್ಪ ಗಣಾಚಾರಿ, ಶೇಖರ ಇಳುಗೇರ ಅವರನ್ನು ಸತ್ಕರಿಸಲಾಯಿತು. ಮಡಿವಾಳಯ್ಯ ಗಣಾಚಾರಿ, ಈರಮ್ಮ ಹಿರೆಮಠ, ಗುರು ಕಲ್ಯಾಣಮಠ ಪೂಜಾ ಕಾರ್ಯಗಳನ್ನು ನೇರವೆರಿಸಿದರು.
ಮಲ್ಲಪ್ಪ ಬೋಳೆತ್ತಿನ, ನಾಗರಾಜ ಬುಡಶೆಟ್ಟಿ, ಮೂಗಬಸಪ್ಪ ಇಂಗಳಗಿ, ಸಿ.ವಾಯ.ಬೂದಿಹಾಳ,
ಈರಣ್ಣ ಬುಡಶೆಟ್ಟಿ, ಈರಣ್ಣ ಚಿಕ್ಕೊಪ್ಪ, ಮಲ್ಲಿಕಾರ್ಜುನ‌ ಹುರಕಡ್ಲಿ, ಮಹಾಂತೇಶ ಕೊರಿಕೊಪ್ಪ, ಈರಪ್ಪ ಗೌರಿ, ಮಂಜು ಹೊಸಮನಿ, ಮಡಿವಾಳಪ್ಪ ಚಳಕೊಪ್ಪ, ಪ್ರಶಾಂತ ಮಾಕಿ, ಬಸವರಾಜ ವಿವೇಕಿ, ಅಡಿವೆಪ್ಪ ಹೂಗಾರ, ಸೋಮಪ್ಪ ತಂಬಾಕ, ಸೋಮು ಏಣಗಿ, ರಾಜು ಪೇಂಟೆದ, ಮಹೇಶ ಆಲದಕಟ್ಟಿ, ಉಮೇಶ ಚುಕ್ಕೊಪ್ಪ, ಮಹೇಶ ಹಮ್ಮಣ್ಣವರ, ಸಂತೋಷ ಪೆಂಟೆದ, ಪ್ರಜ್ವಲ ಅಸುಂಡಿ, ವಿನಾಯಕ ಪೇಂಟೆದ, ಮಂಜು ಬಾರಿಗಿಡದ, ಗುರು ಕಂಬಾರ, ಬಸವರಾಜ ಕರಡಿಗುದ್ದಿ,
ಗುರುರಾಜ ಉಳವಿ, ಮಾಳೇಶ ನುಗ್ಗಾನಟ್ಟಿ ಸೇರಿದಂತೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಇದ್ದರು.

Leave a Reply

Your email address will not be published. Required fields are marked *

error: Content is protected !!