ಬೆಳಗಾವಿ-14 – ಕ್ರಿಕೆಟ್, ಫುಟ್ಬಾಲ್, ಚೆಸ್, ಹೊಡಿದಾಟ, ಬಡಿದಾಟ ಹೀಗೆ ಎಲ್ಲ ಆಟಗಳಲ್ಲಿಯೂ ಸೋಲು ಎಂಬುದಿದೆ. ಸೋಲು ಇರುವಲ್ಲಿ ನೋವು ಇದೆ, ದುಃಖವಿದೆ ಆದರೆ ನಗೆಯಾಟದಲ್ಲಿ ಮಾತ್ರ ಸೋಲು, ನೋವು, ದುಃಖ ಯಾವುದೂ ಇಲ್ಲ, ಇಲ್ಲಿ ಒಬ್ಬರು ನಗಿಸುವುದು ಎಲ್ಲರೂ ಸೇರಿ ನಗುವುದು ಇಬ್ಬರಿಗೂ ಗೆಲವು, ಎಲ್ಲರಿಗೂ ಸಂತೋಷ ಎಂದು ನಗೆಮಾತುಗಾರ ಪ್ರೊ. ಜಿ. ಕೆ. ಕುಲಕರ್ಣಿ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಮತ್ತು ಸಾಹಿತ್ಯಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಇದೇ ದಿ. ೧೩ ಶನಿವಾರ ಸಾ. ೪-೩೦ ಕ್ಕೆ “ನವ ವರುಷದ ನಗೆಯಾಟ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಜಿ.ಕೆ. ಕುಲಕರ್ಣಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಬರಹಗಾರ ಬಿ. ಎಸ್. ಗವಿಮಠರು ಮಾತನಾಡುತ್ತ ನೂರು ತಿಂಗಳ ಗಡಿ ದಾಟಿ ಜನರನ್ನು ನಗಿಸುತ್ತ ನೋವನ್ನು ಮರೆಸುತ್ತ ಜನರ ಪ್ರೀತಿಗೆ ಪಾತ್ರವಾಗಿರುವ ಹಾಸ್ಯಕೂಟದ ಕಾರ್ಯ ನಿಜಕ್ಕೂ ಶ್ಲಾಘನೀಯ ನಿನ್ನೆ ಹೋಯಿತು ನಾಳೆ ಏನಿದೆಯೋ ಗೊತ್ತಿಲ್ಲ ಇಂದಿನ ಈ ದಿನವನ್ನು ನಗುನಗುತ್ತ ಕಳೆಯೋಣ ಎಂದು ಹೇಳಿದರು.
ಪ್ರಾಯೋಜಕತ್ವವನ್ನು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಜಯಶೀಲಾ ಬ್ಯಾಕೋಡ ಮಾತನಾಡಿದರು. ನಿರಂತರವಾದ ಹಾಸ್ಯ ಕಾರ್ಯಕ್ರಮಗಳಿಂದ ಬೆಳಗಾವಿಯಲ್ಲ ಹಾಸ್ಯದ ವಾತಾವರಣ ನಿರ್ಮಿಸಿರುವ ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಅವರನ್ನು ಶಾಲು ಹೊದಿಸಿ, ಮಾಲೆ ಹಾಕಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಗುಂಡೇನಟ್ಟಿ ಮಧುಕರ, ಈ ಗೌರವ ಸಂತೋಷವನ್ನುAಟು ಮಾಡಿದೆ. ಈ ಸನ್ಮಾನ ಗೌರವಗಳೆಲ್ಲ ಹಾಸ್ಯಕೂಟ ಬಳಗಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಜಿ. ಎಸ್. ಸೋನಾರ, ಎಂ. ಬಿ. ಹೊಸಳ್ಳಿ, ತಮ್ಮ ಮಾತುಗಳಿಂದ ರಂಜಿಸಿದರು. ಅರವಿಂದ ಹುನಗುಂದ ನಿರೂಪಿಸಿದರು.