23/12/2024
IMG-20241207-WA0072

*ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪೀಠ ಆರಂಭಿಸಲು ಸರಕಾರ ಅಸ್ತು: ಅಹಿಂದ ನ್ಯಾಯವಾದಿಗಳ ಸಂಘದ ಹೋರಾಟಕ್ಕೆ ಸಿಕ್ಕ *ಜಯ*

ಬೆಳಗಾವಿ-೦೭:ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರದ ಆಯೋಗದ ಪೀಠ ಆರಂಭಿಸಲು ಸರ್ಕಾರ ಮುಂದಾಗಿದ್ದು ಬೆಳಗಾವಿಯ ವಕೀಲರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

IMG 20241207 WA0051 1 -

 

ಬೆಳಗಾವಿ ಅಹಿಂದ ನ್ಯಾಯವಾದಿಗಳ ಸಂಘವು ಸರಕಾರಕ್ಕೆ ನಿರಂತರವಾಗಿ ಒತ್ತಾಯ ಮಾಡುತ್ತಲೇ ಬಂದಿತ್ತು 2020 ರಲ್ಲಿ ಸರ್ಕಾರ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ವ್ಯಾಜ್ಯಗಳ ಪರಿಹಾರ ಆಯೋಗ ಮಂಜೂರು ಮಾಡಿತ್ತು ಆದರೆ ಸರಕಾರದ ಇಚ್ಛಾಶಕ್ತಿಯ ಕೊರತೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪ್ರಾರಂಭ ಮಾಡುವುದು ನೆನೆಗುದಿಗೆ ಬಿದ್ದಿತ್ತು ಅಹಿಂದ ನಾಯಕ ಸತೀಶ್ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಮೇಲೆ ಹೋರಾಟ ಮಾಡುತ್ತಾ ಮನವಿ ಸಲ್ಲಿಸುವ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು ಜೊತೆಗೆ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರು ಸಾಕಷ್ಟು ಶ್ರಮ ಹಾಕಿದ್ದರು ಅದರಂತೆ ಸನ್ಮಾನ್ಯ ಸತೀಶ್ ಜಾರಕಿಹೊಳಿಯವರು ಕೂಡಲೇ ಕಟ್ಟಡ ನಿಗದಿಪಡಿಸಿ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ರಾಜ್ಯಗಳ ಆಯೋಗವನ್ನು ಆರಂಭಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಿದ್ದರು ಅದರಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಅಧಿವೇಶನ ಪ್ರಾರಂಭವಾಗುವುದಕ್ಕಿಂತ ಮೊದಲೇ ಸರಕಾರ ಸಿಹಿ ಸುದ್ದಿ ನೀಡಿದ್ದು ಆದೇಶ ಪ್ರತಿ ಲಭ್ಯವಾಗಿದೆ ಅದರಂತೆ ಬೆಳಗಾವಿಯ ಆಟೋ ನಗರದಲ್ಲಿರುವ ಕೆ.ಎಚ್. ಪಾಟೀಲ ಸಭಾ ಭವನದಲ್ಲಿ ಬಾಡಿಗೆ ಆಧಾರದ ಮೇಲೆ ಆಯೋಗದ ಪೀಠವನ್ನು ಆರಂಭಿಸಲಾಗುತ್ತಿದೆ, ಕಿತ್ತೂರು ಕರ್ನಾಟಕದ ಒಂಬತ್ತು ಜಿಲ್ಲೆಗಳು ಇದರ ಲಾಭ ಪಡೆಯಲಿವೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರು ಎಸ್ ಎಸ್ ಕಿವಡಸನ್ನನವರ್ ಅಹಿಂದ ನ್ಯಾಯವಾದಿಗಳಾದ ಎನ್ ಆರ್ ಲಾತೂರ್ ವಿನೋದ್ ಪಾಟೀಲ್ ನಿಂಗಪ್ಪ ಮಸ್ತಿ ಗಂಗಾಧರ ಶೇಗುಣಸಿ ವಾಯ.ಕೆ.ದಿವಟೆ ರೂಪೇಶ ಲಾತೂರ್, ಯಾದಗೂಡೆ, ಸುರೇಶ್ ಕಾಂಬಳೆ ಬಸವರಾಜ್ ಪೂಜಾರಿ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!