23/12/2024
IMG-20241206-WA0034

ಬೆಳಗಾವಿ-೦೬: ಬೆಳಗಾವಿ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ 68ನೇ ಮಹಾಪರಿ ನಿರ್ವಾಹನ ದಿನದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್( ರಾಜು) ಸೇಠ ಚಾಲನೆ ನೀಡಿದರು.

ಡಾ ಬಾಬಾ ಸಾಹೇಬ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆಸಿಫ್ (ರಾಜು )ಸೇಠ ಡಾಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೇಶಕ್ಕೆ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ ಹಾಗೂ ಗೌರವದ ಬದುಕನ್ನು ನೀಡಿದ್ದಾರೆ. ಅವರ ತತ್ವಗಳು ಸಿದ್ದಾಂತಗಳು ಜೀವನದಲ್ಲಿ ಅಳವಡಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬ ನಾಗರಿಕರ ಈ ದೇಶದಲ್ಲಿ ಸಮಾನರು ಪ್ರತಿಯೊಬ್ಬರಿಗೂ ಗೌರವದಿಂದ ಬದುಕುವ ಹಕ್ಕಿದೆ ಅದನ್ನು ನಾವು ಪಾಲಿಸಬೇಕಾಗಿದೆ ಬಾಬಾ ಸಾಹೇಬ್ ಅವರ ವಿಚಾರಗಳಿಂದ ಈ ದೇಶ ಭಾವೈಕ್ಯತೆ ದಿಂದಿರಲು ಸಹಕಾರವಾಗಿದೆ ಎಂದು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳು ಸಮುದಾಯದ ಮುಖಂಡರಾದ ಮಲ್ಲೇಶ ಚೌಗಲೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!