ಬೆಳಗಾವಿ-೦೬:ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯು ಡಿಸೆಂಬರ್ 9 ರಿಂದ 19 ರ ವರೆಗೆ ವಿಶೇಷ ಏರ್ ಬಸ್ A320 ಹಾರಾಟವನ್ನು ಬೆಂಗಳೂರು – ಬೆಳಗಾವಿಯ ನಡುವೆ ಆರಂಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ.
ಈ ವಿಮಾನವು ಬೆಳಗ್ಗೆ 06:00 ಗಂಟೆಗೆ ಬೆಂಗಳೂರಿನಿಂದ ಹೊರಟು 07:00 ಗಂಟೆಗೆ ಬೆಳಗಾವಿಯನ್ನು ತಲುಪಿ, ಪುನಃ 7:30ಕ್ಕೆ ಬೆಳಗಾವಿಯಿಂದ ಹೊರಟು 8:30ಕ್ಕೆ ಬೆಂಗಳೂರನ್ನು ತಲುಪುತ್ತದೆ. ಈ ವಿಶೇಷ ಏರ್ ಬಸ್ 189 ಆಸನಗಳನ್ನು ಹೊಂದಿದೆ.
ಡಿಸೆಂಬರ್ 20 ರಿಂದ ATR72 ವಿಮಾನ ಸೇವೆಗಳು ಯಥಾ ಸ್ಥಿತಿ ಮುಂದುವರೆಯುವವು. ನಮ್ಮ ಬೇಡಿಕೆಗೆ ಅನುಗುಣವಾಗಿ ಈ ವಿಶೇಷ ಅನುಕೂಲ ಕಲ್ಪಿಸಿದ ಇಂಡಿಗೋ ಏರ್ ಲೈನ್ಸ್ ಸಂಸ್ಥೆಗೆ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.